ಶಾಲಾ ವಾಹನಕ್ಕೆ ಬೆಂಕಿ : ನಾಲ್ಕು ಮಕ್ಕಳು ಸಜೀವ ದಹನ

ಚಂಡೀಗಢ, ಫೆ 15  ಶಾಲೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಕಾರಣ ನಾಲ್ವರು ಮಕ್ಕಳು ಸಜೀವ ದಹನಗೊಂಡ ದಾರುಣ ಘಟನೆ ಜರುಗಿದೆ.
ಈ ಘಟನೆ ಪಂಜಾಬಿನ ಲಾಂಗೋವಾಲ್ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಶಾಲೆಯನ್ನು ಮುಗಿಸಿ ಮಕ್ಕಳು ಮನೆಗೆ ಹಿಂತಿರುವಾಗ ಈ ದುರ್ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲಾ ವಾಹನಕ್ಕೆ ಬೆಂಕಿ ಹೇಗೆ ತಗುಲಿತು ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಈ ಘಟನೆ ನಡೆದಾಗ ಶಾಲಾ ವಾಹನದಲ್ಲಿ 12ಕ್ಕೂ ಹೆಚ್ಚು ಮಕ್ಕಳು ಪ್ರಯಾಣ ಮಾಡುತ್ತಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

Leave a Comment