ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ

ವಿಜಯಪುರ, ಜ. ೯- ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ರೂಬಿ ಶಾಲೆಯ ವಾರ್ಷಿಕೋತ್ಸವ ನಡೆಯುವ ವೇಳೆ ಅಕ್ಕಪಕ್ಕದ ಮರಗಳಿಂದ ಬಂದ ಹೆಜ್ಜೇನು ಹುಳುಗಳು ಇಪ್ಪತ್ತು ಮಕ್ಕಳ ಮೇಲೆ ದಾಳಿ  ನಡೆದ ಘಟನೆ ಮಂಗಳವಾರ ನಡೆದಿದೆ,

ವಾರ್ಷಿಕೋತ್ಸವದ ಹಿನ್ನಲೆ ಆಟದ ಮೈದಾನಕ್ಕೆ ಮಕ್ಕಳು ಹಾಗೂ ಪೋಷಕರು ಆಗಮಿಸಿದ್ದು ಹೆಜ್ಜೇನು ದಾಳಿಗೆ ಚೆಲ್ಲಾಪಿಲ್ಲಿಯಾಗಿ ಓಡಿದರು.

ದೇವನಹಳ್ಳಿ ಹಾಗೂ ವಿಜಯಪುರ ಮುಖ್ಯರಸ್ತೆಯ ಮರಗಳು ಮತ್ತು ಪ್ರವಾಸಿ ಮಂದಿರ ಹಾಗೂ ದೇವ ಆಸ್ಪತ್ರೆಯ ಸುತ್ತಮುತ್ತ ಹಾಗೂ ಎವರ್‌ಗ್ರೀನ್ ಶಾಲೆಯ ಬಳಿ, ಪಟ್ಟಣದ ಬಸ್ ನಿಲ್ದಾಣದ ಬಳಿ ಹೆಜ್ಜೇನು ಗೂಡುಗಳು ಕಟ್ಟಿದೆ. ಒಂದೇ ಮರದ ವಿವಿಧ ಕೊಂಬೆಗಳಲ್ಲಿ ನಾಲ್ಕರಿಂದ ಐದಾರು ಗೂಡುಗಳಿದ್ದು ಇವುಗಳಿಂದ ಸಾಕಷ್ಟು ಬಾರಿ ನೂರಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ಸ್ಥಳೀಯ ಪುರಸಭಾ ಅಧಿಕಾರಿಗಳಿಗೂ ಹಾಗೂ ಜಿಲ್ಲಾ ಅಧಿಕಾರಿಗೂ ಮನವಿಪತ್ರಗಳು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ರವಿಕುಮಾರ್ ತಿಳಿಸಿದರು.

ಇಲ್ಲಿ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ. ಕಾಲೇಜು ಪಕ್ಕದಲ್ಲಿ ಜಿಲ್ಲಾ ಗ್ರಂಥಾಲಯ ಹಾಗೂ ಪ್ರವಾಸಿ ಮಂದಿರವು ಕಾರ್ಯನಿರ್ವಹಿಸುತ್ತಿವೆ. ಮರದ ಬಲಭಾಗದಲ್ಲಿ ಸಾಕಷ್ಟು ಮನೆಗಳು ವಾಸಿಸುತ್ತಿದ್ದು. ಆಕಸ್ಮಿಕವಾಗಿ ಒಂದು ಗೂಡಿಗೆ ಯಡವಟ್ಟು ಮಾಡಿದರೆ ಇಡೀ ಮರದಲ್ಲಿರುವ ಎಲ್ಲಾ ಗೂಡಿನ ಜೇನು ಹುಳುಗಳು ಸಾಮೂಹಿಕವಾಗಿ ದಾಳಿ ಮಾಡುವ ಸಾಧ್ಯ ಇದೆ ಈಗಾಗಲೇ ಒಂದು ವಾರದ ಮುಂಚೆ ಇಲ್ಲಿಯೇ ೫೦ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದವು ಇದರ ಸಂಬಂಧಿಸಿದ ಇಲಾಖೆಗಳ ಗಮನಕ್ಕೂ ತಂದರು ಯಾವುದೇ ಕ್ರಮ ಕೈಗೊಂಡಿಲ್ಲ ಇನ್ನಾದರೂ ಸ್ಥಳೀಯ ಪುರಸಭಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯವರು ಗಮನ ನೀಡದಿದ್ದರೆ ಪ್ರತಿಭಟನೆ ಹಾದಿ ಇಡಿಯಬೇಕಾಗುತ್ತದೆ ಎಂದು ಸ್ಥಳೀಯ ಮುಖಂಡ ಕನಕರಾಜು ತಿಳಿಸಿದರು.

ವಾರದಲ್ಲಿ ಮೂರು ಬಾರಿ ಘಟನೆ: ಶಾಲೆಯ ಮೈದಾನದ ಹಾಗೂ ಸಿಹಿ ನೀರು ಭಾವಿ ಬಳಿ, ದೊಡ್ಡ ಮೋರಿ ಬಳಿ ಆಕಸ್ಮಿಕ ದಾಳಿ ನಡೆಸಿದ ಹೆಜ್ಜೇನುಗಳ ಕಡಿತದಿಂದ ಸುಮಾರು ೩೫ಕ್ಕೂ ಹೆಚ್ಚು ಜನರಿಗೆ  ಗಾಯಗೊಂಡಿದ್ದರು, ೨೫ ರಂದು ಇದೇ ಮೈದಾನದಲ್ಲಿ ೫೦ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆದಿತ್ತು. ಕಳೆದ ತಿಂಗಳಲ್ಲಿ ಪಟ್ಟಣದ ಎವರ್ಗ್ರೀನ್ ಶಾಲೆಯ ಮುಂಭಾಗದಲ್ಲಿ ಹೆಜ್ಜೇನು ದಾಳಿಗೆ ೧೦ ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಅದರೂ, ಸಂಬಂಧಿಸಿದ ಇಲಾಖೆ ಯಾವುದೇ ರೀತಿಯಿಂದ ಕ್ರಮ ಕೈಗೊಂಡಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.
ಪ್ರವಾಸಿ ಮಂದಿರದಲ್ಲಿ ಹೆಜ್ಜೇನು ಗೂಡುಗಳ ಸಂಖ್ಯೆ ಹೆಚ್ಚುತ್ತಿದೆ. ವಾರದಲ್ಲಿ ನಾಲ್ಕಾರು ಬಾರಿ ವಿವಿಧ ಪಕ್ಷ ಮತ್ತು ಇತರೆ ಸಂಘ ಸಂಸ್ಥೆಗಳ ಸಭೆ ನಡೆಯುತ್ತದೆ. ಪಕ್ಕದಲ್ಲೇ ಸರಕಾರಿ ಶಾಲೆಗಳು ಇದೆ.

Leave a Comment