ಶಾಲಾ ಮಕ್ಕಳ ಬಸ್ ಚಾಲಕನ ಗುಂಡಿಕ್ಕಿ ಕೊಲ್ಲಲು ಯತ್ನ

ಮುಜಾಫರ್‌ನಗರ,ಆ.೨೮- ಶಾಲೆಗೆ ತೆರಳಬೇಕಿದ್ದ ೩೪ ಮಕ್ಕಳಿದ್ದ ಶಾಲಾ ಬಸ್ ಬಸ್ ಚಾಲಕನ ಮೇಲೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ್ದಾನೆ.

ಉತ್ತರಪ್ರದೇಶದ ಶಮ್ಲಿ ಜಿಲ್ಲೆಯಲ್ಲಿ ಗಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರು ಚಾಲಕನ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನ ಸಂಜೆ ಮಹಾರಾಜ ಸೂರಜ್‌ಮಲ್ ಪಬ್ಲಿಕ್ ಶಾಲೆಯ ಮಕ್ಕಳನ್ನು ಮನೆಗೆ ತಲುಪಿಸುವ ಮಾರ್ಗ ಮಧ್ಯೆ ಜಟ್ಭನೇದಾ ಪ್ರದೇಶದ ಬಳಿ ಘಟನೆ ನಡೆದಿದೆ.
ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ಕಿಡಿಗೇಡಿಗಳು ಬಸ್ ಅನ್ನು ಅಡ್ಡಗಟ್ಟಿ ಕೃತ್ಯವೆಸಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment