ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಬಳ್ಳಾರಿ, ಜೂ.17: ಬಳ್ಳಾರಿ ಸೇವಾ ಸಮಿತಿಯಿಂದ ನಗರದ ಅಂದ್ರಾಳ್‍ನ ಡಿಸಿ ಕಾಲೋನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಶಾಲೆಯಲ್ಲಿ ಓದುತ್ತಿರುವ ಎಲ್ಲಾ 200 ಮಕ್ಕಳಿಗೆ ಅವಶ್ಯಕತೆ ಇರುವ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು, ಸ್ಲೇಟ್, ಪೆನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ತರಗತಿಗಳಿಗೆ ಗ್ರೀನ್ ಬೋರ್ಡ್‍ಗಳು ಇತರೆ ಲೇಖನ ಸಾಮಗ್ರಿಗಳು ಸೇರಿದಂತೆ ಒಟ್ಟು 82 ಸಾವಿರ ರೂ ಮೌಲ್ಯದ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಬಳ್ಳಾರಿ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಗೋಪಾಲ್ ಮಾತನಾಡಿ, ದೇಶಭಕ್ತಿಗಿಂತ ದೊಡ್ಡದು ಯಾವುದೂ ಇಲ್ಲ. ಎಲ್ಲಾ ಮಕ್ಕಳೂ ನೇತಾಜಿ, ಸುಭಾಷ್ ಚಂದ್ರಬೋಸ್ ರಂತೆ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಪೂರ್ವವಲಯದ ಕ್ಷೇತ್ರ ಸಮನ್ವಯಾಧಿಕಾರಿ ಅಡ್ಡೇರು ಮಲ್ಲಪ್ಪ ಮಾತನಾಡಿದರು.
ಬಳ್ಳಾರಿ ಸೇವಾ ಸಮಿತಿಯ ಮುಖಂಡರಾದ ಎಂ.ಸತ್ಯನಾರಾಯಣ, ಗಾದೆಂ ಗೋಪಾಲಕೃಷ್ಣ, ಟಿ.ಬಿ.ರಾವ್, ಮುತ್ಯಾಲಪ್ಪ ಶಾಲೆ ಶಿಕ್ಷಕರಾದ ಎರ್ರಿಸ್ವಾಮಿ, ಸವರ್ಣ ಬಂಡಿ, ಚಿದಾನಂದಾಚಾರಿ, ಸಿ.ಆರ್.ಪಿ.ಗಳಾದ ವೇಣು ಗೋಪಾಲ್ ಶಿಕ್ಷಕ ದೊಡ್ಡಬಸಪ್ಪ ಹಾಜರಿದ್ದರು. ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ವೀರೇಶ್ ಸ್ವಾಗತಿಸಿದರು. ಚದಾನಂದಾಚಾರಿ ವಂದಿಸಿದರು.

Leave a Comment