ಶಾಲಾ ಪುಸ್ತಕದಲ್ಲಿ ಹೀರೋ ಆದ ಭಯೋತ್ಪಾದಕ..!

ಮುಂಬೈ, ಜ ೧೩- ಭಯೋತ್ಪಾದನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಎನ್‌ಐಎ ತನಿಖೆ ಎದುರಿಸುತ್ತಿರುವ ಝಾಕಿರ್ ನಾಯ್ಕ್ ಎಂಬಾನನ್ನು ಶಾಲಾ ಪುಸ್ತಕದಲ್ಲಿ ಹೀರೋ ಎಂಬಂತೆ ಬಿಂಬಿಸಲಾಗಿದೆ. ಅಲಿಗಢದ ದೋಧ್ಪುರದಲ್ಲಿರುವ ರೋ ದಿ ಇಸ್ಲಾಮಿಕ್ ಮಿಷನ್ ಶಾಲೆಯೊಂದು ಈ ರೀತಿ ಮಾಡಿದೆ.

೧ನೇ ತರಗತಿಯ ಪುಸ್ತಕದಲ್ಲಿ ೯ ಖ್ಯಾತ ಮುಸಲ್ಮಾನ್ ಮುಖಂಡರ ಹೆಸರನ್ನು ಮುದ್ರಿಸಲಾಗಿದೆ. ಅವರಲ್ಲಿ ಝಾಕಿರ್ ನಾಯ್ಕ್ ಕೂಡ ಒಬ್ಬ. ಆತನನ್ನು ಇಸ್ಲಾಮಿಕ್ ಹೀರೋ ಎಂದು ಉಲ್ಲೇಖಿಸಲಾಗಿದೆ. ಈತ ಮುಂಬೈನಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಎಂಬ ಎನ್ ಜಿ ಓ ಒಂದನ್ನು ಆರಂಭಿಸಿದ್ದ.

ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಗಾಗಿ ಈ ಪುಸ್ತಕವನ್ನು ಮುದ್ರಿಸಲಾಗಿದೆಯಂತೆ. ೨ ವರ್ಷಗಳ ಹಿಂದೆ ಮುದ್ರಿಸಿರುವ ಪುಸ್ತಕ ಇದು, ಝಾಕಿರ್ ನಾಯ್ಕ್ ಹೆಸರನ್ನು ತೆಗೆದು ಹಾಕುತ್ತೇವೆ ಎಂದು ಶಾಲಾ ಆಡಳಿತ ಮಂಡಳಿ ಹೇಳುತ್ತಿದೆ.

೨ ವರ್ಷಗಳ ಹಿಂದೆ ಪುಸ್ತಕ ಮುದ್ರಣ ಮಾಡಿದಾಗ ಝಾಕಿರ್ ನಾಯ್ಕ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಈಗ ಆ ಪಠ್ಯವನ್ನು ತೆಗೆದು ಹಾಕಿ ಮರು ಮುದ್ರಣ ಮಾಡುತ್ತೇವೆ ಎಂದು ಶಾಲೆಯ ಮ್ಯಾನೇಜರ್ ಕುನೇನ್ ಕೌಸರ್ ತಿಳಿಸಿದ್ದಾರೆ.

Leave a Comment