ಶಾಲಾ ಅವರಣ ಗೋಡೆ ಕುಸಿತ

ಬಂಟ್ವಾಳ, ಜೂ. ೧೫- ಗುರುವಾರ ಸಂಜೆಯ ಬಳಿಕ ಬಂಟ್ವಾಳದಲ್ಲಿ ಮಳೆ ತೀವ್ರಗೊಂಡ ಪರಿಣಾಮ ರಾತ್ರಿ ಎರಡು ಕಡೆಗಳಲ್ಲಿ ಅವರಣಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ.ಬಂಟ್ವಾಳ ಎಸ್ ವಿ ಎಸ್ ವಿದ್ಯಾಗಿರಿ ಅಂಗ್ಲ ಮಾಧ್ಯಮ ಶಾಲೆಯ ನಿರ್ಮಾಣ ಹಂತದಲ್ಲಿದ್ದ ಅವರಣಗೋಡೆ ಕುಸಿದು ಪಕ್ಕದ ಬಸ್ ತಂಗುದಾಣವು ಹಾನಿಗೊಂಡಿದೆ.
ರಾತ್ರಿ ವೇಳೆ ಈ ಘಟನೆ ನಡೆದಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.ಅವರಣಗೋಡೆ ಕುಸಿತದಿಂದಾಗಿ ಬಸ್ ತಂಗುದಾಣ ಸಂಪೂರ್ಣ ಜಖಂಗೊಂಡಿದೆ. ಹಾಗೆಯೇ ಬಿ.ಮೂಡ ಗ್ರಾಮದ ಬಂಟಗುರಿ ಎಂಬಲ್ಲಿ ರಂಜಿನಿ ಎಂಬವರ ಮನೆಯ ಅಂಚಿಗೆ ಬರೆ ಜರಿದುಬಿದ್ದಿದೆ.
ಸ್ಥಳಕ್ಕೆ ಪುರಸಭಾ ಸದಸ್ಯೆ ಜಯಂತಿ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೆಕಾರ್, ತಾಲೂಕು ಕಚೇರಿ ಸಿಬಂದಿ ಸದಾಶಿವ ಕೈಕಂಬ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಂಟ್ವಾಳದಾದ್ಯಂತ ಇಡೀ ಹೊತ್ತು ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಲೆ ಇತ್ತು.
ಗುರುವಾರ ಸುರಿದ ಜಡಿ ಮಳೆಯಿಂದ ಸರಪಾಡಿ ಎಂಆರ್ ಪಿ ಎಲ್ ಡ್ಯಾಂ ನಲ್ಲಿ ನೀರು. ಉಕ್ಕಿ ಹರಿದಿತ್ತಾದರೂ ತುಂಬೆ ಡ್ಯಾಂ ನಲ್ಲಿ ನೀರು ಭರ್ತಿಯಾಗಿರಲಿಲ್ಲ,ಆದರೆ ಶುಕ್ರವಾರ ಸಂಜೆಯ ವೇಳೆಗೆ ತುಂಬೆ ಡ್ಯಾಂನಲ್ಲಿ ೩.೫೦ ಮೀ.ಗೆ ನೀರಿನ ಹರಿವು ಏರಿಕೆಯಾಗಿದೆ. ಶುಕ್ರವಾರ ಇಡೀ ದಿನ ಮೋಡ ಕವಿದ ವಾತಾವರಣ ಇದ್ದು,ಸಂಜೆಯ ವೇಳೆಗೆ ಮಳೆ ಸುರಿಯಲಾರಂಭಿಸಿತ್ತು.

Leave a Comment