ಶಾರ್ವರಿನಾಮ ಸಂವತ್ಸರದ ಪಂಚಾಂಗ ಬಿಡುಗಡೆ

ಬಳ್ಳಾರಿ, ಮಾ.24: ಬಳ್ಳಾರಿ ಕಲ್ಚರಲ್ ಅಕ್ಟಿವಿಟೀಸ್ ಅಸೋಸಿಯೇಷನ್‍ದಿಂದ ನಗರದ ಕಲ್ಯಾಣ ಸ್ವಾಮಿ ಮಠದಲ್ಲಿ ನಿನ್ನೆ ಹೊಸ ವರ್ಷದ ಶ್ರೀ ಶಾರ್ವರಿನಾಮ ಸಂವತ್ಸರದ ಪಂಚಾಂಗವನ್ನು ಬಿಡುಗಡೆ ಮಾಡಲಾಯಿತು.

ಉಮಾ ಮಹೇಶ್ವರ ಪಂಚಾಂಗದ ಲೇಖಕ ಪಂಡಿತ್ ಮಠಂ ಗುರುಪ್ರಸಾದ್ ಅವರು 2020-21 ನೇ ಸಾಲಿನ ರಾಶಿ ಫಲಗಳು ಮತ್ತು ವರ್ಷದ ಫಲಿತಾಂಶಗಳ ಬಗ್ಗೆ ತಯಾರಿಸಿದ ಪಂಚಾಂಗವನ್ನು ಕಲ್ಯಾಣ ಸ್ವಾಮೀಜಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಶೀಲಾ ಬ್ರಹ್ಮಯ್ಯ, ಖಜಾಂಚಿ ಡಾ. ಯಶವಂತ ಭೂಪಾಲ್, ಸಹ ಕಾರ್ಯದರ್ಶಿ ಪಿ. ಗಾದೆಪ್ಪ, ಪಂಡಿತ್ ಮಠಂ ಗುರುಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Comment