ಶಾರ್ಜಾದಲ್ಲಿ   ಮಾರ್ಚ್  ೨೭ ರಂದು  ಇಳಯರಾಜ ಸಂಗೀತ  ಕಾರ್ಯಕ್ರಮ

ಶಾರ್ಜಾ, ಫೆ 22- ಭಾರತೀಯ  ಚಲನ ಚಿತ್ರರಂಗದ   ಸಂಗೀತ  ದಿಗ್ಗಜ   ಇಳಯರಾಜ   ಅವರ  ಹಾಡುಗಳು ಯಾರಿಗೆ ಇಷ್ಟವಾಗುವುದಿಲ್ಲ..?  ಇಳಯರಾಜ    ಅವರ  ಸಿನಿಮಾ ಅನೇಕ ಹಾಡುಗಳು  ಈಗಲೂ  ಶ್ರೋತೃಗಳನ್ನು ಮಂತ್ರ ಮುಗ್ಧಗೊಳಿಸುತ್ತವೆ. ಬಹಳ  ವರ್ಷಗಳ  ನಂತರ,   ಇಳಯರಾಜ  ಶಾರ್ಜಾದಲ್ಲಿ ಸಂಗೀತ ಕಾರ್ಯಕ್ರಮ  ನಡೆಸಿಕೊಡಲಿದ್ದಾರೆ  ಈ  ಕಾರ್ಯಕ್ರಮ ಮಾರ್ಚ್ ೨೭ ರಂದು ಶಾರ್ಜಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಪ್ರದರ್ಶನದಲ್ಲಿ  ಹಲವಾರು ಪ್ರಮುಖ ಗಾಯಕ ಗಾಯಕರು ಭಾಗವಹಿಸುತ್ತಿದ್ದಾರೆ. ಎಸ್‌  ಪಿ ಬಾಲಸುಬ್ರಮಣ್ಯಂ,  ಮನು. ಮಧು ಬಾಲಕೃಷ್ಣನ್, ಉಷಾ ಉತ್ತಪ್, ಶ್ವೇತಾ ಮೋಹನ್, ವಿಭಾವರಿ, ಮತ್ತು ಅನಿತಾ ಕಾರ್ತಿಕೇಯನ್   ರಂಜಿಸಲಿದ್ದಾರೆ. ಕಾರ್ಯಕ್ರಮದ ಟಿಕೆಟ್  ಗುರುವಾರ  ಮಾರಾಟ  ಆರಂಭವಾಗಿದೆ  ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ಟಿಕೆಟ್‌ಗಳನ್ನು ’ಬುಕ್‌ಮೈಶೋ’ ಮೂಲಕ ಖರೀದಿಸಬಹುದು.

Leave a Comment