ಶಾರುಖ್ ಸಿನಿಮಾ ತಿರಸ್ಕರಿಸಿದ ದೀಪಿಕಾ!

’ಓಂ ಶಾಂತಿ ಓಂ’, ’ಚೆನ್ನೈ ಎಕ್ಸ್ ಪ್ರೆಸ್’, ’ಹ್ಯಾಪಿ ನ್ಯೂ ಇಯರ್’ ನಂತಹ ಯಶಸ್ವಿ ಸಿನಿಮಾಗಳ ಜೋಡಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಮತ್ತೆ ಒಟ್ಟಾಗಿ ತೆರೆಮೇಲೆ ಬರಲಿರುವ ಸುದ್ದಿ ಕೇಳಿ ಬಾಲಿವುಡ್ ಸಿನಿ ಪ್ರೇಮಿಗಳು ಖುಷಿ ಆಗಿದ್ದರು. ಆದರೆ ಲೇಟೆಸ್ಟ್ ವರದಿಗಳ ಪ್ರಕಾರ ದೀಪಿಕಾ, ಶಾರುಖ್ ಜೊತೆ ನಟಿಸುವುದಿಲ್ಲ ಎಂದು ತಿಳಿದಿದೆ.
ಹೌದು, ಆನಂದ್ ಎಲ್.ರೈ ಅವರ ಹೊಸ ಚಿತ್ರ ’ಡ್ವಾರ್ಫ್’ ನಲ್ಲಿ ಶಾರುಖ್ ಖಾನ್‌ಗೆ ನಾಯಕಿ ಆಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ದೀಪಿಕಾ ಪಡುಕೋಣೆ ಅವರೇ ’ಡ್ವಾರ್ಫ್’ ಅನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದಿದೆ.
ಮುಂಬೈ ಮಿರರ್‌ಗೆ ದೊರಕಿರುವ ಮಾಹಿತಿ ಪ್ರಕಾರ, “ದೀಪಿಕಾ ಪಡುಕೋಣೆಗೆ ’ಡ್ವಾರ್ಫ್’ ಚಿತ್ರದಲ್ಲಿ ನಟಿಸಲು ಆಸಕ್ತಿ ಇತ್ತು. ಆದರೆ ದುರಾದೃಷ್ಟವಶಾತ್ ಸಂಜಯ್ ಲೀಲಾ ಬನ್ಸಾಲಿ ಅವರ ’ಪದ್ಮಾವತಿ’ ಮತ್ತು ’ಡ್ವಾರ್ಫ್’ ನಲ್ಲಿ ಅಭಿನಯಿಸಲು ದಿನಾಂಕ ಹೊಂದಾಣಿಕೆ ಆಗುತ್ತಿಲ್ಲವಂತೆ”.

ಆನಂದ್ ಎಲ್.ರೈಗೆ ನೊ.. ಎಂದ ದೀಪಿಕಾ..
“ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿ ಅವರ ಐತಿಹಾಸಿಕ ಚಿತ್ರ ’ಪದ್ಮಾವತಿ’ಯ ಚಿತ್ರಿಕರಣದಲ್ಲಿ ತೊಡಗಿರುವುದರಿಂದ ಆನಂದ್ ಎಲ್.ರೈ ಗೆ ನೆರವಾಗಿಯೇ ನೋ ಎಂದಿದ್ದಾರೆ”.
ದೀಪಿಕಾ, ಶಾರುಖ್ ಅಭಿನಯದ ’ಡ್ವಾರ್ಫ್’ ಚಿತ್ರೀಕರಣ ಆರಂಭವಾಗುವ ವೇಳೆಗೆ ಪದ್ಮಾವತಿ’ ಚಿತ್ರೀಕರಣ ಮುಗಿಯುತ್ತದೆ ಎಂದುಕೊಂಡಿದ್ದರಂತೆ. ಆದರೆ ಕೋಲ್ಹಾಪುರ್‌ನಲ್ಲಿ ’ಪದ್ಮಾವತಿ’ ಚಿತ್ರತಂಡದ ಮೇಲಿನ ದಾಳಿಯಿಂದಾಗಿ ಸಿನಿಮಾ ಪೂರ್ಣಗೊಳ್ಳಲು ತಡವಾಗಿರುವುದು ’ಡ್ವಾರ್ಫ್’ ರಿಜೆಕ್ಟ್ ಮಾಡಲು ಕಾರಣ.
“ಬನ್ಸಾಲಿ ಅವರು ಹಲವು ಬಾರಿ ಚಿತ್ರೀಕರಣದ ದಿನಾಂಕ ಮುಂದುಡಿದ ಕಾರಣ ದೀಪಿಕಾ ಸಹ ಅವರ ಡೇಟ್‌ಗೆ ಫಿಕ್ಸ್ ಆಗಿದ್ದಾರೆ. ಆದ್ದರಿಂದ ಆನಂದ್ ಎಲ್.ರೈ ಚಿತ್ರಕ್ಕೆ ದಿನಾಂಕ ಹೊಂದಾಣಿಕೆ ಆಗದೇ ನೀವು ಚಿತ್ರ ಮುಂದುವರೆಸಿ ಎಂದಿದ್ದಾರೆ.

ಶಾರುಖ್ ಖಾನ್ ಅಪ್ ಸೆಟ್ ಆದ್ರಾ?
ದೀಪಿಕಾ ರಿಜೆಕ್ಟ್ ಮಾಡಿದ ಕಾರಣ ಓಕೆ. ಆದರೆ ಶಾರುಖ್ ಖಾನ್ ಇದನ್ನ ಪಾಸಿಟಿವ್ ಆಗಿ ತಗೊಂಡ್ರಾ? ಇಲ್ವಾ? ಅನ್ನೋದು ಡೌಟ್. ಯಾಕಂದ್ರೆ ಈ ಹಿಂದೆ ದೀಪಿಕಾ, ಸಲ್ಮಾನ್ ಖಾನ್ ಚಿತ್ರವನ್ನು ರಿಜೆಕ್ಟ್ ಮಾಡಿದಾಗ. ಸಲ್ಲು ತುಂಬಾ ಅಪ್ ಸೆಟ್ ಆಗಿದ್ದರು.

ಕತ್ರಿನಾ ಇದ್ದಾರೆ…
ಕತ್ರಿನಾ ಕೈಫ್, ಶಾರುಖ್ ಖಾನ್ ಅಭಿನಯದ ’ಡ್ವಾರ್ಫ್’ ನಲ್ಲಿ ಇನ್ನೂ ಇದ್ದಾರೆ. ಆದರೆ ನಿರ್ದೇಶಕ ಆನಂದ್ ಎಲ್.ರೈ ದೀಪಿಕಾ ಬದಲು ಇನ್ನೊಬ್ಬ ನಟಿಗಾಗಿ ಹುಟುಕಾಟ ಆರಂಭಿಸಿದ್ದಾರೆ. ’ಡ್ವಾರ್ಫ್’ ಗೆಟಪ್‌ನಲ್ಲಿ ಶಾರುಖ್ ಖಾನ್ ಚಿತ್ರಕ್ಕೆ ಯಾರು ಬರಲಿ ಬಿಡಲಿ. ಆದರೆ ಶಾರುಖ್ ಖಾನ್ ಕಂಪ್ಲೀಟ್ ಹೊಸ ಅವತಾರದಲ್ಲಿ ’ಡ್ವಾರ್ಫ್’ ಪಾತ್ರವನ್ನು ನಿರ್ವಹಿಸಲಿದ್ದಾರೆ.

Leave a Comment