ಶಾರದಾ ಚಿಟ್ ಫಂಡ್ ಹಗರಣ; ಅರ್ಜಿ ವಜಾ- ಮಾಜಿ ಪೊಲೀಸ್ ಕಮಿಷನರ್ ಗೆ ಬಂಧನ ಭೀತಿ

ಕೋಲ್ಕತಾ:ಸೆ.೧೩.ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾದ ಮಾಜಿ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ ಅವರನ್ನು ಬಂಧಿಸದಂತೆ ತಡೆ ನೀಡಿದ್ದ ಆದೇಶವನ್ನು ಕೋಲ್ಕತಾ ಹೈಕೋರ್ಟ್ ಶುಕ್ರವಾರ ತೆರವುಗೊಳಿಸಿದ್ದು, ಇದರಿಂದ ರಾಜೀವ್ ಕುಮಾರ್ ಬಂಧನ ಭೀತಿಗೊಳಗಾಗಿದ್ದಾರೆ.

ತಮ್ಮನ್ನು ವಿಚಾರಣೆಗೊಳಪಡಿಸಲು ಸಿಬಿಐ ಹಾಜರಾಗುವಂತೆ ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ರಾಜೀವ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಅರ್ಜಿದಾರರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ತಮ್ಮನ್ನೇ ಟಾರ್ಗೆಟ್ ಮಾಡಿದ್ದಾರೆ ಎಂಬ ದೂರು ಸತ್ಯವಲ್ಲ. ಸಿಬಿಐ ನೋಟಿಸ್ ಜಾರಿಗೊಳಿಸುವುದನ್ನು ದುರುದ್ದೇಶ ಎಂದು ಅರ್ಥೈಸಿಕೊಳ್ಳಬಾರದು ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.

ಒಂದು ವೇಳೆ ನಾವು ಈಗ ಬಂಧನ ಅಥವಾ ತನಿಖೆಗೆ ನೀಡಿದ್ದ ರಕ್ಷಣೆಯನ್ನು ತೆರವುಗೊಳಿಸದೇ ಇದ್ದಲ್ಲಿ, ಬಳಿಕ ನಾವು ತನಿಖೆ ವೇಳೆ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಕೋಲ್ಕತಾ ಹೈಕೋರ್ಟ್ ತೀರ್ಪು ಪ್ರಕಟಿಸುತ್ತಾ ಉಲ್ಲೇಖಿಸಿದೆ.

ಈ ಹಿನ್ನೆಲೆಯಲ್ಲಿ ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಕುಮಾರ್ ಬಂಧನಕ್ಕೆ ಸಿಬಿಐಗೆ ಮುಕ್ತ ಅವಕಾಶ ಒದಗಿಸಿಕೊಟ್ಟಂತಾಗಿದೆ.

Leave a Comment