ಶಾಮನೂರು ಸೇರಿ ಐದು ಮಂದಿ ಶಾಸಕರಿಗೆ ಟಿಕೇಟ್

ಜಗಳೂರಿಗೆ ಪುಷ್ಪಾ ಲಕ್ಷ್ಮಣಸ್ವಾಮಿ, ಮಾಯಕೊಂಡಕ್ಕೆ ಕೆ.ಎಸ್. ಬಸವರಾಜ್
ದಾವಣಗೆರೆ, ಏ. 16 – ತೀವ್ರ ಕುತೂಹಲ ಮೂಡಿಸಿದ್ದ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದ್ದು ಐವರು ಹಾಲಿ ಶಾಸಕರಿಗೆ ಈ ಬಾರಿ ಟಿಕೇಟ್ ದೊರೆತಿದೆ. ಉಳಿದಂತೆ ಜಗಳೂರಿನಲ್ಲಿ ಶಾಸಕ ಹೆಚ್.ಪಿ.ರಾಜೇಶ್ ಹಾಗೂ ಮಾಯಕೊಂಡ ಶಾಸಕ ಕೆ.ಶಿವಮೂರ್ತಿ ಅವರಿಗೆ ಟಿಕೇಟ್ ಕೈತಪ್ಪಿದೆ. ತೀವ್ರ ಕುತೂಹಲ ಮೂಡಿಸಿದ್ದ ಹಾಗೂ ಅತೀ ಹೆಚ್ಚಿನ ಆಕಾಂಕ್ಷಿಗಳಿದ್ದ ಮಾಯಕೊಂಡ ಕ್ಷೇತ್ರಕ್ಕೆ ಜಿ.ಪಂ ಸದಸ್ಯ ಬಸವಂತಪ್ಪಗೆ ಟಿಕೇಟ್ ದೊರೆತಿದೆ. ಇನ್ನು ಜಗಳೂರಿಗೆ ಕೆಪಿಸಿಸಿ ಕಾರ್ಯದರ್ಶಿ ಎ.ಎಲ್.ಪುಷ್ಪಲಕ್ಷ್ಮಣಸ್ವಾಮಿ ಅವರಿಗೆ ಟಿಕೇಟ್ ದೊರೆತಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಟಿಕೇಟ್ ದೊರೆತಿದೆ. ಚನ್ನಗಿರಿಕ್ಷೇತ್ರಕ್ಕೆ ವಡ್ನಾಳ್ ರಾಜಣ್ಣ, ಹೊನ್ನಾಳಿಗೆ ಡಿ.ಜಿ.ಶಾಂತನಗೌಡ, ಹರಪನಹಳ್ಳಿಯಲ್ಲಿ ಎಂ.ಪಿ.ರವೀಂದ್ರ ಹಾಗೂ ಹರಿಹರ ಕ್ಷೇತ್ರದಿಂದ ಎಸ್.ರಾಮಪ್ಪ ಅವರಿಗೆ ಟಿಕೇಟ್ ದೊರೆತಿದೆ.
@10ಟಿಛಿ = ಶಿವಮೂರ್ತಿನಾಯ್ಕ್ ಗೆ ಕೋಕ್
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕೆ.ಶಿವಮೂರ್ತಿ ನಾಯ್ಕ್ ಅವರಿಗೆ ಈ ಬಾರಿ ಹೈಕಮಾಂಡ್ ಕೋಕ್ ನೀಡಿದೆ. ಇತ್ತೀಚಿಗೆ ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ಅವರು ಕ್ಷೇತ್ರದಲ್ಲಿ ದುರ್ಬಲರಾಗಿದ್ದಾರೆಂಬ ಮಾಹಿತಿ ದೊರೆತ ಹಿನ್ನಲೆಯಲ್ಲಿ ಈ ವಿದ್ಯಾಮಾನಗಳು ನಡೆದಿದೆ. ಶಿವಮೂರ್ತಿನಾಯ್ಕ್ ಅವರಿಗೆ ಟಿಕೇಟ್ ನೀಡದಂತೆ ಕಾಂಗ್ರೆಸ್ ಮುಖಂಡರೇ ಆಕ್ಷೇಪ ವ್ಯಕ್ತಪಡಿಸಿದ್ದರು. ತೀವ್ರ ಕುತೂಹಲ ಮೂಡಿಸಿದ್ದಕ್ಷೇತ್ರಗಳಲ್ಲಿ ಮಾಯಕೊಂಡವು ಸಹ ಒಂದು ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರವಾದ ಮಾಯಕೊಂಡದಲ್ಲಿ ಕಾಂಗ್ರೆಸ್ ಪಕ್ಷದಿಂದ ಸುಮಾರು 15 ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಾಗಿದ್ದರು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಹೆಚ್.ವೀರಭದ್ರಪ್ಪ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದರು ಆದರೆ ಹೈಕಮಾಂಡ್ ಸಚಿವ ಹೆಚ್.ಆಂಜನೇಯ ಅವರ ಅಳಿಯ ಹಾಗೂ ಜಿ.ಪಂ ಸದಸ್ಯರಾಗಿರುವ ಕೆ.ಎಸ್.ಬಸವಂತಪ್ಪ ಅವರಿಗೆ ಟಿಕೇಟ್ ನೀಡಿ ಅಚ್ಚರಿ ಮೂಡಿಸಿದೆ. ಇನ್ನು ಜಗಳೂರಿನಲ್ಲಿ ಹಾಲಿ ಶಾಸಕ ಹೆಚ್.ಪಿ,ರಾಜೇಶ್ ಬದಲಿಗೆ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷೆಯಾಗಿರುವ ಪುಷ್ಪಲಕ್ಷ್ಮಣಸ್ವಾಮಿಗೆ ಟಿಕೇಟ್ ದೊರೆತಿದೆ. ಈ ಭಾಗದಲ್ಲಿ ಪುಷ್ಪಲಕ್ಷ್ಮಣಸ್ವಾಮಿ ಪ್ರಬಲರಾಗಿದ್ದಾರೆ.ಹೊನ್ನಾಳಿಯಿಂದ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಅವರಿಗೆ ಟಿಕೇಟ್ ದೊರೆಯುತ್ತದೆ ಎಂಬ ಮಾತುಗಳು ಆಪ್ತ ವಲಯದಲ್ಲಿಕೇಳಿ ಬರುತ್ತಿದೆ. ಆದರೆ ಹೈಕಮಾಂಡ್ ಮತ್ತೊಮ್ಮೆ ಡಿ,.ಜಿ.ಶಾಂತನಗೌಡ ಅವರ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ.

Leave a Comment