ಶಾಕಿಂಗ್ ಸಂಗತಿ ಬಹಿರಂಗಪಡಿಸಿದ ನಟಿ ವಿದ್ಯಾಬಾಲನ್

ಮಂಬೈ.ಆ.27.ಬಾಲಿವುಡ್ ನಟಿ ವಿದ್ಯಾ ಬಾಲನ್ ಎಲ್ಲ ವಿಷ್ಯದ ಬಗ್ಗೆ ಮುಕ್ತವಾಗಿ ಮಾತನಾಡ್ತಾರೆ. ಇತ್ತೀಚೆಗೆ ವಿದ್ಯಾ ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ.

ಒಂದು ಸಮಯದಲ್ಲಿ ವಿದ್ಯಾ ಬಾಲನ್ ಕೈನಲ್ಲಿ ಒಂದು ಎರಡು ಚಿತ್ರವಲ್ಲ ಬರೋಬ್ಬರಿ 12 ಚಿತ್ರಗಳ ಆಫರ್ ಬಂದಿತ್ತಂತೆ. ಈ ಸಂದರ್ಭದಲ್ಲಿ ನಿರ್ದೇಶಕರೊಬ್ಬರು ವಿದ್ಯಾ ಬಾಲನ್ ಅವ್ರನ್ನು ಹೊಟೇಲ್ ಗೆ ಕರೆದೊಯ್ಯುವ ಮನಸ್ಸು ಮಾಡಿದ್ದರಂತೆ. ಸಂದರ್ಶನವೊಂದರಲ್ಲಿ ಈ ಸಂಗತಿ ಹೇಳಿದ ವಿದ್ಯಾಬಾಲನ್ ಘಟನೆ ಚೆನ್ನೈನಲ್ಲಿ ನಡೆದಿದೆ ಎಂದಿದ್ದಾರೆ.

ಚೆನ್ನೈನಲ್ಲಿ ನಿರ್ದೇಶಕರೊಬ್ಬರನ್ನು ಭೇಟಿಯಾಗಲು ವಿದ್ಯಾ ಬಾಲನ್ ಹೋಗಿದ್ದರಂತೆ. ಈ ವೇಳೆ ವಿದ್ಯಾ, ಕಾಫಿ ಡೇಗೆ ಹೋಗೋಣ ಎಂದ್ರಂತೆ. ಆದ್ರೆ ನಿರ್ದೇಶಕರಿಗೆ ಮನಸ್ಸಿರಲಿಲ್ಲವಂತೆ. ಹೊಟೇಲ್ ರೂಮಿಗೆ ಹೋಗೋಣ. ನಿಮ್ಮ ಜೊತೆ ಮಾತನಾಡಬೇಕು ಎನ್ನುತ್ತಿದ್ದರಂತೆ.

ಅವ್ರ ಮಾತಿಗೆ ಮನ್ನಣೆ ನೀಡಿ ನಾನು ರೂಮಿಗೆ ಹೋದೆ. ಆದ್ರೆ ರೂಮಿನ ಬಾಗಿಲು ಹಾಕಲಿಲ್ಲ. ಐದು ನಿಮಿಷ ಕಾದ ನಿರ್ದೇಶಕರು ಅಲ್ಲಿಂದ ಎದ್ದು ಹೋದ್ರು ಎಂದು ವಿದ್ಯಾ ಹೇಳಿದ್ದಾರೆ.

Leave a Comment