ಶಾಂತ ಸಾಗರದಲ್ಲಿ ಮೊದಲ ಬಾರಿಗೆ ಭಾರತದ ಸಮರ ವಿಮಾನಾಭ್ಯಾಸ

ನವದೆಹಲಿ, ಜು. ೧೧- ಭಾರತೀಯ ನೌಕಾಪಡೆಯ ಪಿ. 81 ಸಮರ ಕಾರ್ಯಾಚರಣೆ ವಿಮಾನವನ್ನು ಮೊಟ್ಟ ಮೊದಲ ಬಾರಿಗೆ ಫೆಸಿಫಿಕ್ ಸಾಗರ ಸುತ್ತಲ ರಾಷ್ಟ್ರಗಳ ಆರ್.ಪಿ.ಎಂ.ಪಿ.ಎ.ಸಿ-18 ಕೂಟದ ಜಂಟಿ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಲು ಹವಾಯ್ ದ್ವೀಪಕ್ಕೆ ರವಾನಿಸಲಾಗಿದೆ. ವಿಶ್ವದ ಅತಿದೊಡ್ಡ ಬಹು ರಾಷ್ಟ್ರಗಳ ಜಂಟಿ ನೌಕಾ ಸಮರಾಭ್ಯಾಸ ಇದಾಗಿದೆ.
ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ರಂಜಲಿಯಲ್ಲಿರುವ ಈ ವಿಮಾನ ದೀರ್ಘ ವ್ಯಾಪ್ತಿಯಲ್ಲಿಯ ರಕ್ಷಣಾ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿದೆ. ಈ ವಿಮಾನ 27 ರಾಷ್ಟ್ರಗಳ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸುತ್ತಿರುವುದು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ.
ಮೊದಲನೆಯದಾಗಿ ಈ ವಿಮಾನ ಮೊದಲ ಬಾರಿಗೆ ಫೆಸಿಫಿಕ್ ರಿಮ್ ರಾಷ್ಟ್ರಗಳ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸುತ್ತಿದೆ. ಎರಡನೆಯದಾಗಿ ಫೆಸಿಫಿಕ್ ಸಾಗರದ ಪೂರ್ವದತ್ತ 3300 ನಾಟಿಕಲ್ ಮೈಲುಗಳಷ್ಟು ದೂರ ಪ್ರಯಾಣಿಸಿ ಹವಾಯ್ ತಲುಪುವುದು. ಹಾಗೂ ಮೂರನೇಯದಾಗಿ ವಿಶ್ವದ ಅತಿ ದೊಡ್ಡ ಬಹುರಾಷ್ಟ್ರಗಳ ಜಂಟಿ ಸಮರಾಭ್ಯಾಸದಲ್ಲಿ ಭಾಹವಹಿಸುವುದು ಅನ್ಯ ರಾಷ್ಟ್ರಗಳ ನೌಕಾಪಡೆಗಳೊಂದಿಗೆ ಮಹಾ ಸಾಗರದಲ್ಲಿಯ ಯುದ್ಧ ಕಾರ್ಯಾಚರಣೆ ಸಮರಾಭ್ಯಾಸದಲ್ಲಿ ಜಲಾಂತರ್ಗಾಮಿ ನಿಗ್ರಹದಿಂದ ಹಿಡಿದು ಯುದ್ಧಕಾಲದಲ್ಲಿ ನೌಕಾಪಡೆಯು ಎಲ್ಲ ರೀತಿಯ ಕಸರತನ್ನು ನಡೆಸಲಾಗುತ್ತದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.

Leave a Comment