ಶಾಂತಿ ಕದಡಿದರೆ ಗೂಂಡಾ ಕಾಯ್ದೆಯಡಿ ಕೇಸ್

 

ಕಲಬುರಗಿ,ನ.8-ಅಯೋಧ್ಯೆ ರಾಮಮಂದಿರ ಮತ್ತು ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಅದರ ವಿರುದ್ಧ ವ್ಯತಿರಿಕ್ತವಾಗಿ ಹೇಳಿಕೆ ನೀಡುವುದು, ಜನರ ಭಾವನೆಗೆ ಧಕ್ಕೆ ಆಗುವಂತೆ ಸಾಮಾಜಿಕ ಜಾಲತಾಣ ಬಳಸುವುದು ಮಾಡಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಎಚ್ಚರಿಕೆ ನೀಡಿದ್ದಾರೆ.

ನಗರದ ಪೊಲೀಸ್ ಮೈದಾನದಲ್ಲಿ ಅಯೋಧ್ಯೆ ತೀರ್ಪು ಮತ್ತು ಈದ್ ಮಿಲಾಪ್ ಸಂಬಂಧ ಗುರುವಾರ ಸಂಜೆ ನಡೆದ ಶಾಂತಿ ಮತ್ತು ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ತೀರ್ಪು ಬಂದ ಬಳಿಕ ದೇಶದ ಜನತೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶ ನೀಡಿದೆ. ಆದ್ದರಿಂದ ಸಮಾಜಘಾತಕ ಶಕ್ತಿಗಳು ಏನಾದರೂ ಬೇಳೆ ಬೇಯಿಸಲು ಪ್ರಯತ್ನ ಮಾಡಿದರೆ ಅಂತಹವರ ವಿರುದ್ಧ ಗೂಂಡಾ, ಟಾಡಾ ಕಾಯ್ದೆ ಅಡಿಯಲ್ಲಿ ಕೇಸು ಹಾಕಿ ಗ್ಯಾರಂಟಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಶ್ರೀಶೈಲ ಸಾರಂಗ ಮಠದ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಮೌಲಾನಾ ಶರೀಫ್, ಡಿಸಿಪಿ ಕಿಶೋರ ಬಾಬು, ಮೂರು ವಿಭಾಗದ ಎಸಿಪಿಗಳು, ಸರ್ಕಲ್ ಇನ್ಸಪೆಕ್ಟರ್ ಗಳು, ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ, ಶಿವು ಸ್ವಾಮಿ, ಇಲಿಯಾಸ್ ಸೇಠ ಭಾಗವಾನ್, ಮೊಹಮ್ಮದ್ ಅಸಗರ ಚುಲಬುಲ್, ಅಸ್ಫಾಕ್ ಅಹ್ಮದ್ ಚುಲಬುಲ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

Leave a Comment