ಶಾಂತಲಿಂಗೇಶ್ವರ ಮಠದಲ್ಲಿ ಆಷಾಡ ಕಾರ್ಯಕ್ರಮ

 

ಕಲಬುರಗಿ ಜು 10: ನಗರದ ಶಹಾಬಜಾರ ಶೇಖರೋಜಾ ಶಾಂತಲಿಂಗೇಶ್ವರ ಕಡಗಂಚಿ ಮಠದಲ್ಲಿ ನಾಳೆ ( ಜುಲೈ 11) ಯಿಂದ ಜುಲೈ 23 ರವರೆಗೆ ಆಷಾಢ ಮಾಸದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪೀಠಾಧಿಪತಿಗಳಾದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾಳೆ ( ಜು.11) ಸಂಜೆ 7 ಗಂಟೆಗೆ ಶಾಂತಲಿಂಗೇಶ್ವರ ಪುರಾಣ ಉದ್ಘಾಟಣೆಗೊಳ್ಳಲಿದೆ. ಜು.15 ರವರೆಗೆ ಪ್ರತಿದಿನ ಸಂಜೆ  7 ರಿಂದ ಶಾಂತಲಿಂಗೇಶ್ವರ ಪುರಾಣ ಪ್ರವಚನ ನಡೆಯಲಿದೆ.16 ರಂದು ಸಂಜೆ 7 ಗಂಟೆಗೆ  ಗುರುಪೂರ್ಣಿಮೆ ನಿಮಿತ್ತ ಅಷ್ಟಮಠಗಳ ಭಕ್ತರಿಂದ ಗುರುವಂದನೆ ನಡೆಯಲಿದೆ.

ಸಿದ್ಧಾಂತ ಶಿಖಾಮಣಿ ಪ್ರವಚನ:

ಜುಲೈ 17 ರಂದು ಸಂಜೆ 6.30 ಕ್ಕೆ ಸಿದ್ಧಾಂತ ಶಿಖಾಮಣಿ ಮತ್ತು ವಚನ ಸಾಹಿತ್ಯದ ಸಮನ್ವಯಾತ್ಮಕ ಅಧ್ಯಾತ್ಮಕ ಪ್ರವಚನ ಉದ್ಘಾಟನೆಗೊಳ್ಳಲಿದೆ. ಜುಲೈ 22 ರವರೆಗೆ  ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು  ಪ್ರತಿದಿನ ಸಂಜೆ 6.30 ಕ್ಕೆ ಪ್ರವಚನ ನೀಡುವರು.

23 ರಂದು ಬೆಳಿಗ್ಗೆ 9 ಗಂಟೆಗೆ ಸಾರೋಟಿನಲ್ಲಿ ಕಾಶಿ ಜಗದ್ಗುರುಗಳ ಭವ್ಯ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಪ್ರವಚನ ಮಹಾಮಂಗಳಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ,ಅಧ್ಯಾತ್ಮಿಕ ಚಿಂತಕರು. ಸಂಗೀತಕಲಾವಿದರು, ಸದ್ಭಕ್ತರು ಸೇರಿದಂತೆ ಅನೇಕರು ಪಾಲ್ಗೊಳ್ಳುವರು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕರಿಸಿದ್ಧಪ್ಪ ಪಾಟೀಲ ಹರಸೂರ,ಅಣ್ಣಾರಾವ ಬೆಣ್ಣೂರ,ಶರಣಬಸಪ್ಪ ಭೂಸನೂರ,ಶಿವಾನಂದ ಮಠಪತಿ,ದುಂಡಪ್ಪ ಬಿರಾದಾರ ಸೇರಿದಂತೆ ಹಲವರಿದ್ದರು.

Leave a Comment