ಶಸ್ತ್ರ ಸಂಗ್ರಹಾಗಾರ ಮೇಲೆ ಸ್ಫೋಟ: ೩೯ ಸಾವು

ಬೈರುತ್,ಆ.೧೩- ವಾಯುವ್ಯ ಸಿರಿಯಾ ಪ್ರಾಂತ್ಯದ ಇಡ್ಲಿಬ್‌ನಲ್ಲಿ ಶಸ್ತ್ರ ಸಂಗ್ರಹಾಗಾರದ ಬಳಿ ಸ್ಫೋಟ ಸಂಭವಿಸಿದ್ದು ೧೨ ಮಕ್ಕಳು ಸೇರಿದಂತೆ ಕನಿಷ್ಠ ೩೯ ಮಂದಿ ಅಸುನೀಗಿದ್ದಾರೆ.

ಸರ್ಮದಾ ನಗರದ ಕಟ್ಟಡದಲ್ಲಿ ಶಸ್ತ್ರಗಳ ಕಳ್ಳ ಸಾಗಾಣಿಕೆ ಮಾಡುವವರಿಗೆ ಸೇರಿದ ಶಸ್ತ್ರಗಳನ್ನು ಸಂಗ್ರಹಿಸಿಡಲಾಗಿತ್ತು. ಸ್ಫೋಟದ ಭೀಕರತೆಗೆ ಎರಡು ಕಟ್ಟಗಳು ನೆಲಸಮವಾಗಿದೆ ಎಂದು ತಿಳಿಸಿದ್ದಾರೆ.

ಅವಶೇಷಗಳಡಿಯಲ್ಲಿ ಇನ್ನೂ ಹಲವು ಮಂದಿ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವ ಇದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಕ್ಷಣಾ ಮೇಲ್ವಿಚಾರಕರು ತಿಳಿಸಿದ್ದಾರೆ.

ಇಡ್ಲಿಬ್‌ನಲ್ಲಿ ಅತಿ ಹೆಚ್ಚು ಮಂದಿ ಉಗ್ರರು ಅಡಗಿರುವ ತಾಣವಾಗಿದ್ದು, ಉಗ್ರರ ಮುಂದಿನ ಗುರಿ ಸಿರಿಯಾದ ಸೇನಾ ಪಡೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಸ್ಫೋಟಕ್ಕೆ ಖಚಿತ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.

Leave a Comment