ಶಸ್ತ್ರಾಸ್ತ್ರ ಕಳವು ಪ್ರಕರಣ ಸಬ್‌ಇನ್ಸ್‌ಪೆಕ್ಟರ್ ಬಂಧನ

ಕೊಲ್ಕತ್ತ, ಜ. ೨೩- ಲಾಲ್‌ಘಡ್ ಪೊಲೀಸ್ ಠಾಣೆಯಲ್ಲಿ ನಾಗರಿಕರು ಇಟ್ಟಿದ್ದ ೧೮ ಪರವಾನಗಿಯುಳ್ಳ ಶಸ್ತ್ರಾಸ್ತ್ರಗಳನ್ನು ಸಬ್‌ಇನ್ಸ್‌ಪೆಕ್ಟರ್ ಕಳವು ಮಾಡಿದ್ದಾರೆ. ಆದರೆ, ಯಾವ ರೀತಿಯ ಶಸ್ತ್ರಾಸ್ತ್ರ ಕಳವಾಗಿದೆ ಎಂಬ ಅಂಶವನ್ನು ಬಹಿರಂಗಪಡಿಸಲು ಪಶ್ಚಿಮಬಂಗಾಳ ಜಿಲ್ಲೆಯ ಜರ್‌ಗ್ರಾಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬರಾಕ್ ರಾಥೋಡ್ ನಿರಾಕರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ತಲಪಾಡತುರುನನ್ನು ಬಂಧಿಸಿ, ೫ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಪಡೆಯ ಯೋಧ ಲಕ್ಷ್ಮಿರಾಂ ರಾಣಾ, ಇಬ್ಬರು ಗ್ರಾಮಸ್ಥರಾದ ಸುಧಾಂಶು ಸೇನಾಪಟಿ ಮತ್ತು ಈತನ ಪುತ್ರ ದಿಲೀಪ್ ಸೇನಾಪಟಿ ಅವರನ್ನು ಬಂಧಿಸಲಾಗಿದೆ.
ಪರವಾನಗಿಯುಳ್ಳ ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಇಲ್ಲವೆ ಕಾನೂನುಬದ್ಧವಾಗಿ ಶಸ್ತ್ರಾಸ್ತ್ರ ಹೊಂದಿರುವ ನಾಗರಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಈ ಪರಾವನಗಿಯುಳ್ಳ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಯಲ್ಲಿರಿಸಿದ್ದರು.
ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಬಂದ ಬಳಿಕ ಮಾವೊವಾದಿ ನಾಯಕ ಕೋಟೇಶ್ವರರಾವ್ ಅಲಿಯಾಸ್ ಕಿಶನ್ ಜೀಯನ್ನು ಗುಂಡಿನ ಕಾಳದಲ್ಲಿ ಹತ್ಯೆ ಮಾಡಲಾಗಿತ್ತು. ಈ ಘಟನೆ ನಡೆದು ದಶಕಗಳ ನಂತರ ಲಾಲ್‌ಘಡ್ ಮಾವೊವಾದಿಗಳ ಪ್ರಮುಖ ತಾಣವಾಗಿದೆ ಎಂದು ರಾಥೋಡ್ ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದ ವೇಳೆ ಅಲ್ಲಿರುವ ಶಸ್ತ್ರಾಸ್ತ್ರಗಳು ಕಳುವಾಗಿರುವುದು ಪತ್ತೆಯಾಯಿತು. ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ಈ ಠಾಣೆಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಈಚ ಜಂಬೋಣಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈತನನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

Leave a Comment