ಶವ ಪತ್ತೆ :ಕೊಲೆ ಶಂಕೆ

 

ಕಲಬುರಗಿ,ಸೆ.12-ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದ ಜಮೀನಿನಲ್ಲಿ ಸಿದ್ರಾಮಪ್ಪಗೌಡ ಬಸವಂತರಾಯ ಜಗಶೆಟ್ಟಿ (35) ಎಂಬುವವರ ಶವ ಪತ್ತೆಯಾಗಿದೆ.

ಅವರದೇ ತೊಗರಿ ಹೊಲದಲ್ಲಿ ಶವ ಪತ್ತೆಯಾಗಿದ್ದು, ಯಾರೋ ಕೊಲೆ ಮಾಡಿರಬಹುದು ಎಂದು ಅವರ ಕುಟುಂಬವರ್ಗದವರು ಶಂಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿದು ಸಿದ್ರಾಮಪ್ಪಗೌಡ ಜಗಶೆಟ್ಟಿ ಕುಟುಂಬವರ್ಗದವರು, ಗ್ರಾಮಸ್ಥರು ಮತ್ತು ನೆಲೋಗಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮೃತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

 

Leave a Comment