ಶರಣ ಹರಳಯ್ಯ ಗುರು ರವಿದಾಸ ಜಯಂತಿ 12 ರಂದು

ಕಲಬುರಗಿ ಆ 10: ಹೈದ್ರಾಬಾದ ಕರ್ನಾಟಕ ಶರಣ ಹರಳಯ್ಯ ಹಾಗೂ ಸಂತ ಗುರು ರವಿದಾಸ ಸಮಗಾರ ( ಚಮ್ಮಾರ) ಸಮಾಜ ಸೇವಾ ಸಂಘವು ಆಗಸ್ಟ್ 12 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ ಎಸ್ ಎಂ ಪಂಡಿತರಂಗಮಂದಿರದಲ್ಲಿ ಶರಣ ಹರಳಯ್ಯ ಮತ್ತು ಗುರು ರವಿದಾಸರವರ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಜಯಂತಿ ಉತ್ಸವದಲ್ಲಿ  ನೂತನ ಶಾಸಕರಿಗೆ ಸನ್ಮಾನ,ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಗಣ್ಯರ ಸತ್ಕಾರ ಮತ್ತು ವಚನ ಗಾಯನ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ಸಂಘದ ಅಧ್ಯಕ್ಷ  ಭೀಮಾಶಂಕರ ತದ್ದೇವಾಡಿ ಮತ್ತು ಗೌರವಾಧ್ಯಕ್ಷ ಸಂಬಾಜಿರಾವ ಟಿಳ್ಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸುವರು, ಕಲಬುರಗಿ ಗ್ರಾಮೀಣಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಸಿಡಿ ಮತ್ತು ಭಾವಚಿತ್ರ ಬಿಡುಗಡೆ ಮಾಡಲಿದ್ದು ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವದು.ಶಾಸಕ ದತಾತ್ರೇಯ ಪಾಟೀಲ ರೇವೂರ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಶಾಸಕರಾದ ಎಂವೈ ಪಾಟೀಲ, ಸುಭಾಷ ಗುತ್ತೇದಾರ,ಕನೀಜ್ ಫಾತಿಮಾ, ಮೇಯರ್ ಶರಣಕುಮಾರ ಮೋದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.

ಬಾಬುರಾವ ಕೋಬಾಳ, ಮತ್ತು ಸಿದ್ದಾರ್ಥ ಚಿಮ್ಮಾ ಇದಲಾಯಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.ವಿಜಯಪುರ ಜಿಲ್ಲೆ ಶೇಗುಣಸಿಯ ಶಿವಶರಣ ಹರಳಯ್ಯ ತೀರ್ಥಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ,ಜೇವರಗಿ ತಾಲೂಕು ಚಿಗರಳ್ಳಿಯ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ಮತ್ತು ಬೀದರ ಸಂತ ರವಿದಾಸ ಗುರುಪೀಠದ ಮಾತಾ ಲಲಿತಾದೇವಿ ಅವರು ಸಾನಿಧ್ಯ ವಹಿಸುವರು ಎಂದು ವಿವರಿಸಿದರು..

Leave a Comment