ಶರಣೆ ಅಕ್ಕನಾಗಮ್ಮನವರ ಸ್ಮರಣೋತ್ಸವ

ಧಾರವಾಡ: ತಾಲೂಕಿನ ಮನಗುಂಡಿಯ ಶ್ರೀ ಗುರು ಬಸವ ಮಹಾಮನೆಯ ಚನ್ನಯ್ಯನಗಿರಿಯಲ್ಲಿ ಆಗಸ್ಟ್ 13 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ 109ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ    ಕ್ರಾಂತಿ ಗಂಗೋತ್ರಿ ಶರಣೆ ಅಕ್ಕನಾಗಮ್ಮನವರ ಸ್ಮರಣೋತ್ಸವ  ಜರುಗಲಿದೆ. ಇದರ ಸಾನ್ನಿಧ್ಯವನ್ನು   ಶ್ರೀ ಗುರು ಬಸವ ಮಹಾಮನೆಯ ಪೀಠಾಧಿಪತಿ ಪರಮ ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿ ವಹಿಸಲಿದ್ದಾರೆ.
ಇದರ ಸಮ್ಮುಖವನ್ನು ಶರಣೆ ಸುಗುಣಾತಾಯಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಧಾರವಾಡದ ಸುವರ್ಣ ಎಜುಕೇಶನ ಸೂಸೈಟಿಯ ಕಾರ್ಯದರ್ಶಿ ಶ್ರೀಮತಿ ಸವಿತಾ ಅಮರಶೆಟ್ಟಿ, ಆಗಮಿಸಲಿದ್ದಾರೆ.    ಯೋಗಶಿಕ್ಷಕಿ ಡಾ. ಶೋಭಾ ಹುಲಿಕಟ್ಟಿ ಅವರು ಉಪನ್ಯಾಸ ನೀಡಲಿದ್ದಾರೆ.
ಗದಗನ ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕರಾದ ಬಸವರಾಜ ಹಿಡ್ಕಿಮಠ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಇದರ ದಾಸೋಹ ಸೇವೆಯನ್ನು   ರೋಣ ತಾಲೂಕಿನ ಜಕ್ಕಲಿ ಗ್ರಾಮದ ವೀರಪ್ಪ ಮಲ್ಲಪ್ಪ ಗಾಣಗೇರ ಅವರು ವಹಿಸಿಕೊಂಡಿದ್ದಾರೆ. ಮಹಾಮನೆಯ ಸದ್ಭಕ್ತರು 106ನೇ ಶಿವಾನುಭವಗೋಷ್ಠಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು  ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Leave a Comment