ಶರಣರ ಜೀವನ ಆದರ್ಶ

ಮುಂಡಗೋಡ,ಡಿ6 : ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ವಚನಾಮೃತ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ನಿವೃತ್ತ ಕೃಷಿ ಅಧಿಕಾರಿ ಆರ್.ವಿ.ಹಿರೇಮಠ ಉದ್ಘಾಟಿಸಿದರು. ವಚನಗಳು ಮತ್ತು ಪ್ರಸ್ತುತ ಸಂದರ್ಭದಲ್ಲಿ ಅದರ ಅನುಕರಣೆಯ ಕುರಿತಾಗಿ ಸಾಹಿತಿ ಚಿದಾನಂದ ಪಾಟೀಲ ಉಪನ್ಯಾಸ ನೀಡಿ, ಶರಣ ಜೀವನ ನಮಗೆಲ್ಲಾ ಆದರ್ಶಪ್ರಾಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಂಡಗೋಡ ತಾಲೂಕಾ ಕ.ಸಾ.ಪ. ಅಧ್ಯಕ್ಷರಾದ ನಾಗೇಶ ಪಾಲನಕರ ಮಾತನಾಡಿ, ನವೆಂಬರ ತಿಮಗಳಲ್ಲಿ ಮಾತ್ರ ನಾವು ಕನ್ನಡಿಗರಾಗದೇ ವರ್ಷದ 12 ತಿಂಗಳೂ ಕನ್ನಡಿಗರಾಗಿರೋಣ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಬಿ.ಹೂಗಾರ, ರಾಜ್ಯ ಸರಕರಿ ನೌಕರರ ಸಂಘದ ಅಧ್ಯಕ್ಷರಾದ ಸುಭಾಸ ಡೋರಿ, ಶಿಕ್ಷಕರಾದ ಬಾಲಚಂದ್ರ ಹೆಗಡೆ, ಪ.ಪಂ. ಮಾಜಿ ಸದಸ್ಯೆ ರಮಬಾಯಿ ಕುದಳೆ, ರಾಜ್ಯ ಪ್ರಶಸ್ತಿ ಪತ್ರಕರ್ತ ರಾಜಶೇಖರ ನಾಯ್ಕ, ಲಕ್ಷ್ನಣ ವರೂರ, ಟಿ.ಎಸ್.ಗುದಗಿ ಇದ್ದರು. ಗೌರವ ಸಲಹೆಗಾರರಾದ ತುಕರಾಮ ಸಾನು ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷರಾದ ಜಗದೀಶ ಮೋರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  ಗೌರವ ಸಲಹೆಗಾರರಾದ ತುಕರಾಮ ಸಾನು ವಂದಿಸಿದರು.

Leave a Comment