ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು

ನರೇಗಲ್ಲ, ಸೆ 12- ಭಕ್ತಿ ಮಾರ್ಗದಲ್ಲಿ ನೆಮ್ಮದಿ ಬದುಕು ಕಾಣ ಸಾಧ್ಯವಿದ್ದು, ಪಟ್ಟಣದಲ್ಲಿ ನಡೆಯುವ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಪ್ರವಚನಕಾರ ಶಂಕ್ರಣ್ಣ ಅಂಗಡಿ ಹೇಳಿದರು.
ಅವರು ಪಟ್ಟಣದ ಶ್ರೀ ಕಟ್ಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಜರುಗಿದ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಶರಣಬಸವೇಶ್ವರ ಜೀವನ ದರ್ಶನ ಪ್ರವಚ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

 
12ನೇ ಶತಮಾನದ ಬಸವಾದಿ ಶರಣರ ಹಾಕಿಕೊಟ್ಟ ಮಾರ್ಗದಂತೆ ಎಲ್ಲರೂ ನಡೆಯಬೇಕು. ಮನದ ಮೈಲಿಗೆ ತೊಳೆಯಲು ಕೂಡಲಶರಣರ ಅನುಭಾವ ಮುಖ್ಯ. ಆದ್ದರಿಂದ ಶರಣರ ತತ್ತ್ವಾದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಶರೀರ ಮನುಸ್ಸು ಜ್ಞಾನ, ಆರೋಗ್ಯ, ಒಳ್ಳೆಯ ಸಂಸ್ಕಾರ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಾವುದು ಶಾಶ್ವತವಲ್ಲ, ಈ ಶರೀರ ಅಸ್ಥಿರವಾಗಿದೆ. ಯಾವಾಗ ಏನಾದರೂ ಆಗಹಬಹುದು. ಗಾಳಿಗೆ ಇಟ್ಟ ದೀಪದಂತಿರುವ ಈ ಕಾಯ ಶಾಶ್ವತವಲ್ಲ. ಯವ್ವನ ಸಹ ಶಾಶ್ವತವಲ್ಲ. ಮನುಷ್ಯನ ದೇಹದಲ್ಲಿ ರಕ್ತ ಹೇಗೆ ಚಲಿಸುತ್ತದೇಯೋ ಹಾಗೆ ದುಡ್ಡನ್ನು ಸಹ ಕೂಡಿಡೆದೆ ಈ ಶರೀರದಿಮದ ಜೀವನದಲ್ಲಿ ಧರ್ಮದ ಕಾರ್ಯವನ್ನು ಮಾಡಿಸಿ ಕೀರ್ತಿಯನ್ನು ಗಳಿಸುವಂತರಾಗಬೇಕು ಎಂದರು.

 

 
ಶಿಕ್ಷಕ ಎಂ.ಕೆ. ಬೇವಿನಕಟ್ಟಿ ಮಾತನಾಡಿ, ಜಾತಿಯ ಬೇರನ್ನು ಕಿತ್ತು ಹಾಕಿ, ಸರ್ವಸಮಾನತೆಯ ಸಮಾಜವನ್ನು ಕಟ್ಟಿದವರು ಶರಣರು. ಶರಣ ಚಳವಳಿ ಜಗತ್ತಿನ ಮೊದಲ ಚಳವಳಿ. ಜಗತ್ತಿನ ಮೊದಲ ಸಂಸತ್ತಾದ ಅನುಭವ ಮಂಟಪವನ್ನು ಕಟ್ಟಿ ಮಾನವ ಹಕ್ಕುಗಳನ್ನು ಪ್ರತಿಪಾದನೆ ಮಾಡಿದ ಬಸವಾದಿ ಶರಣರ ಬದುಕು ನೂತನ. ಬಸವತತ್ವ ಎಂಬುವುದು ವಿಶ್ವತತ್ವವಾಗಿದೆ. ಕಾಯಕ ದಾಸೋಹ, ಸಮಾನತೆ, ವೈಚಾರಿಕತೆ, ಮಾನವೀಯತೆ, ಶಿವಯೋಗ ತತ್ವಗಳ ಮೂಲಕ ಪ್ರಚಾರ ಮಧ್ಯಮಗಳು ಇಲ್ಲದ 12ನೇ ಶತಮಾನದಲ್ಲಿಯೇ ಜನರನ್ನು ಆಕರ್ಷಿಸಿದ್ದರು. ಶರಣ ಚರಿತಾಮೃತ ಪ್ರವಚನ ನಮ್ಮ ಬದುಕಿಗೆ ಬೆಳಕನ್ನು ನೀಡುತ್ತದೆ. ಜೀವನದ ಸಮಸ್ಯೆಗಳಿಗೆ ಶರಣರ ಬದುಕು ಮತ್ತು ಬರಹಗಳಲ್ಲಿ ಪರಿಹಾರವಿದೆ. ಶರಣ ತತ್ವ ಪಾಲಿಸಿದರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದರು.
ಮರಿಗೌಡ ಬೊಮ್ಮನಗೌಡ್ರ ಅಧ್ಯಕ್ಷತೆಯನ್ನು ವಹಿಸಿದ್ದರು.

Leave a Comment