ಶರಣಬಸವೇಶ್ವರರು ಕಲ್ಪವೃಕ್ಷದಂತೆ : ಶಿಥಿಕಂಠೇಶ್ವರಶ್ರೀ

ಕುಂದಗೋಳ ಸೆ12:   ಕಲಬುರ್ಗಿ ಶರಣ ಬಸವೇಶ್ವರರಿಗೆ ಮಕ್ಕಳಿಲ್ಲದವರು 1008 ರೂ.ಮುಡುಪಾಗಿಟ್ಟರೆ ಸಂತಾನ ಭಾಗ್ಯ ಕರುಣಿಸುವದು ಖಚಿತವಾಗಿದ್ದು, ಬೇಡಿದ ಭಕ್ತರಿಗೆ ಕಲ್ಪವೃಕ್ಷವಾಗಿದ್ದಾರೆ ಎಂದು ಪಟ್ಟಣದ ಪಂಚಗ್ರಹ ಹಿರೇಮಠದ ಶ್ರೀ ಶಿಥಿಕಂಠೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಪಂಚಗ್ರಹ ಹಿರೇಮಠದಲ್ಲಿ ಕಲಬುರ್ಗಿ ಶರಣ ಬಸವೇಶ್ವರರು ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಮಂಗಲೋತ್ಸವದ ಸಾನಿಧ್ಯ ವಹಿಸಿಕೊಂಡ ಅವರು ಆಶೀರ್ವಚನ ನೀಡುತ್ತ ಹಿಂದೂ ದೃವತೆಗಳ ಪವಾಡ ಸಾಕಷ್ಟಿದ್ದು, ಆ ದೈವತ್ವವನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯ ನಮ್ಮ ಸಮಾಜದ್ದಾಗಿದೆಯಲ್ಲದೆ ಅವರಿಗೆ ಪುರಾಣ-ಪ್ರವಚನಾಧಿಗಳನ್ನು ಆಲಿಸಲು ಪ್ರೋತ್ಸಾಹಿಸುತ್ತ ಬಂದರೆ ದೇವಾನು-ದೇವತೆಗಳ ಮಹತ್ವ ತಿಳಿದಂತಾಗುತ್ತದೆ. ಭಕ್ತರಿಗಾಗಿ ನೆರವೇರಿಸುವ ಇಂಥಹ ಕಥೆಗಳನ್ನು ಆಲಿಸಿ ಪುನೀತರಾಗಿರಿ ಎಂದು ಆಶೀರ್ವಧಿಸಿದರು.
ತಾಲೂಕಿನ ಹಿರೇಹರಕುಣಿ ಗ್ರಾಮದ ಮಲ್ಲಿಂಗ್‍ಶಾವಲಿ ಬಾಬಾ ಅವರು ಮಾತನಾಡಿ ಹಿರೇಮಠದಲ್ಲಿ ಒಂದು ದಿವ್ಯವಾದ ಶಕ್ತಿ ಇದ್ದು, ನನಗೆ ಇಲ್ಲಿಯೇ ಲಿಂಗದೀಕ್ಷೆಯಾಗಿದೆ ಅಲ್ಲದೆ ನನಗೆ ಈ ಪೀಠಾಧ್ಯಕ್ಷರೇ ಗುರುಗೋವಿಂದ ಭಟ್ಟರಿದ್ದಂತಾಗಿದ್ದು, ಈಗಲೂ ನನ್ನ ಹಾಗೂ ಶ್ರೀಗಳನ್ನು ಶರೀಫರು ಮತ್ತು ಗುರುಗೋವಿಂದ ಭಟ್ಟರೆಂದು ಭಕ್ತರು ಕರೆಯುವದು ವಾಡಿಕೆ ಎಂದು ಹೇಳಿದರು.
ಪುರಾಣಿಕರಾದ ಶಿವಮೂರ್ಯಯ್ಯ ಮಣಕಟ್ಟಿಮಠ, ಹಾರ್ಮೋನಿಯಂ ವೀರಯ್ಯ ವಸ್ತ್ರದ ಹಾಗೂ ತಬಲಾವಾದಿ ಮಾನಪ್ಪ ಬಡಿಗೇರ ಅವರನ್ನು ಸನ್ಮಾನಿಸಿ-ಗೌರವಿಸಕಾಯಿತು. ಮಂಗಲೋತ್ಸವದಲ್ಲಿ ರುದ್ರಸ್ವಾಮಿ ನಾವಳ್ಳಿಮಠ, ವಿನೋದ ಬೋಸ್ಲೆ, ಸಂಭಾಜಿ ತಡಸದ, ಮಾರುತಿ ಕಾಲವಾಡಹಾಗೂ ಅನ್ನಪೂರ್ಣೆಶ್ವರಿ ಮಹಿಳಾ ಮಂಡಳ, ವಿವಿಧ ಭಜನಾ ಸಂಘದವರು ಪಾಲ್ಗೊಂಡಿದ್ದರು.

Leave a Comment