ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ: ಮರು ಪರಿಶೀಲನೆಗೆ ಒತ್ತಾಯ

ರಾಯಚೂರು.ಅ.11- ಸುಪ್ರೀಂ ಕೋರ್ಟ್ ಆದೇಶದನ್ವಯ ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ನೀಡಿರುವ ತೀರ್ಪು ಮರು ಪರಿಶೀಲಿಸಬೇಕೆಂದು ಆಗ್ರಹಿಸಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಮುಖಂಡರು ಕಪ್ಪು ಪಟ್ಟಿ ಧರಿಸಿ, ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸುಪ್ರೀಂ ಕೋರ್ಟ್ ಆದೇಶದನ್ವಯ ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಒಳ ಪ್ರವೇಶಿಸಲು ಅನುಮತಿ ನೀಡಿರುವ ತೀರ್ಪು ತಡೆ ಹಿಡಿದು, ಶ್ರೀ ಅಯ್ಯಪ್ಪ ಸ್ವಾಮಿ ವಂಶಸ್ಥರಾದ ಪಂದಳಂ ರಾಜ್ ಮನೆತನದವರು ಹಾಗೂ ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಮೇಲ್ ಶಾಂತಿ ಮತ್ತು ತಂತ್ರಿಗಳು ಸುಪ್ರೀಂ ಕೋರ್ಟ್ ಆದೇಶ ಮರುಪರಿಸೀಲಿಸಬೇಕೆಂದು ಮೇಲ್ಮನವಿ ಸಲ್ಲಿಸಿದ್ದಾರೆ.
ಪ್ರಾಚೀನ ಕಾಲದಿಂದಲೂ ಸುಮಾರು 800 ವರ್ಷಗಳಿಂದ ಆಚರಣೆಯಲ್ಲಿರುವ ದೇಗುಲದ ಆಚಾರ-ವಿಚಾರ ಹಾಗೂ ತತ್ವಗಳನ್ನು ಗೌರವಿಸಬೇಕೆಂದು ಅಯ್ಯಪ್ಪ ಸ್ವಾಮಿ ಗುರುಸ್ವಾಮಿಗಳು ಮತ್ತು ಧೀಕ್ಷಾರ್ಥಿಗಳು, ಭಕ್ತಾಧಿಗಳು ಸುಪ್ರೀಂಕೋರ್ಟ್ ಆದೇಶ ತಡೆ ಹಿಡಿದು, ಮರು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು.
ಸುಬ್ರಮಣ್ಯಂ ಅರ್ಚಕರು , ಶೇಖರ ಗುರುಸ್ವಾಮಿ, ಆರ್.ನಾಗರಾಜ್ ಸ್ವಾಮಿ, ಪುಂಡ್ಲ ರಾಜೇಂದ್ರ ರೆಡ್ಡಿ, ಸೂರ್ಯ ನಾರಾಯಣರಾವ್, ಎ.ಈಶ್ವರ್ ಸ್ವಾಮಿ, ಡಿ.ವೀರೇಶ್ ಸ್ವಾಮಿ, ಶರಣಪ್ಪ ಸ್ವಾಮಿ, ಪಿ.ಯಲ್ಲಪ್ಪ ಸ್ವಾಮಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Comment