ಶಬರಿಮಲೈ ಯಾತ್ರೆಗೆ ಹೊರಟ ಶಿವಣ್ಣ

ಬೆಂಗಳೂರು, ಮಾ. 16 – ಹಿರಿಯ ನಟ ಶಿವರಾಜ್‍ಕುಮಾರ್  ಸ್ನೇಹಿತರು, ಕುಟುಂಬದ ಸದಸ್ಯರು ಹಾಗು ಚಿತ್ರರಂಗದ ಸಹದ್ಯೋಗಿಗಳೊಂದಿಗೆ ಸಂಜೆ ಶಬರಿಮಲೆಗೆ ತೆರಳಲಿದ್ದಾರೆ.

ಕಳೆದ 9 ವರ್ಷದಿಂದ  ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಯುತ್ತಿರುವ ನಟ ಶಿವರಾಜ್‍ಕುಮಾರ್ ಅವರಿಗೆ ಈ ಬಾರಿ ಚಿತ್ರರಂಗದ ಹಲವು ಮಂದಿ ಜತೆಯಾಗಲಿದ್ದಾರೆ.

ಬೆಳಿಗ್ಗೆ ನಾಗವಾರದಲ್ಲಿರುವ ಶಿವರಾಜ್‍ಕುಮಾರ್ ಅವರ ನಿವಾಸದಲ್ಲಿ ಹಿರಿಯ ನಟ ಗುರುಸ್ವಾಮಿ ಶಿವರಾಮ್ ನೇತೃತ್ವದಲ್ಲಿ ಇರುಮುಡಿಪೂಜೆ ನಡೆಯಿತು. ಅನ್ನಸಂತರ್ಪಣೆ ನಡೆಯಿತು.

Leave a Comment