ಶಬರಿಮಲೆಗೆ 7000 ಮಂದಿ ಭೇಟಿ ಭಕ್ತರು ಮಾತ್ರ 200

ಶಬರಿಮಲೆ, ನ.೮- ಮಾಸಿಕ ಪೂಜೆಗಾಗಿ ಈ ತಿಂಗಳ 5 ಮತ್ತು 6 ರಂದು ತೆರೆಯಲಾಗಿದ್ದ ಶಬರಿಮಲೆ ದೇಗುಲಕ್ಕೆ 7300 ಭಕ್ತರು ಆಗಮಿಸಿದ್ದರು ಎಂಬ ಲೆಕ್ಕಇದ್ದರೂ ಆದರೇ ಶ್ರದ್ಧಾ ಭಕ್ತಿಯಿಂದ ಬಂದ ಭಕ್ತರು ಕೇವಲ 200 ಮಂದಿ ಎಂಬ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿಯಂತೆ ಈ ಎರಡು ದಿನಗಳಲ್ಲಿ ದೇಗುಲಕ್ಕೆ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರೂ ಭಕ್ತರ ರೂಪದಲ್ಲಿ ಬಂದಿದ್ದರು ಎಂದು ಹೇಳಿದ್ದಾರೆ..
ಕಳೆದ ತಿಂಗಳೂ ಕೂಡ ಮಾಸಿಕ ಪೂಜೆ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲನ್ನು ತೆರೆದಿದ್ದು ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಗಂಭೀರ ಗಲಭೆ ನಡೆದಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಹಿಳೆಯರು ದೇಗುಲವನ್ನು ಪ್ರವೇಶಿಸಲು ಯತ್ನಿಸಿದ್ದರು. ಈ ಬಾರಿಯೂ ಕೂಡ ಗಲಾಟೆ ನಡೆಯಬಹುದಾದ ನಿರೀಕ್ಷೆ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

Leave a Comment