ಶನಿಗ್ರಹದ ಉಂಗುರಗಳು ಕರಗಿ ಹೋಗುತ್ತಿವೆ

  • ಉತ್ತನೂರು ವೆಂಕಟೇಶ್

ಶನಿಗ್ರಹಕ್ಕೆ ಭೂಷಣ ಪ್ರಾಯವಾಗಿರುವ ಮತ್ತು ಗ್ರಹಕ್ಕೆ ವಿಷೇಷ ಆಕರ್ಷಣೆಯನ್ನು ತಂದುಕೊಟ್ಟಿರುವ ಅದರ ಸುತ್ತಲಿನ ವಿಶೇಷ ಉಂಗುರಗಳು ಕ್ರಮೇಣ ಕರಗಿ ಹೋಗುತ್ತಿವೆ ಎಂದು ನಾಸಾದ ಹೊಸ ಅಧ್ಯಯನ ವರದಿ ಹೇಳಿದೆ.

ಶನಿಗ್ರಹದ ಸುತ್ತಲೂ ಆವರಿಸಿರುವ ವಿಶೇಷ ಆಕರ್ಷಣೀಯವಾಗಿರುವ ಅದರ ಉಂಗುರಗಳು ಕ್ರಮೇಣ ಕರಗುತ್ತಿದ್ದು ಮುಂದೊಂದು ದಿನ  ಗ್ರಹದ ಸುತ್ತಲಿನ ಉಂಗುರಗಳು ಸಂಪೂರ್ಣವಾಗಿ ಕರಗಿ ಹೋಗುವ ಮೂಲಕ ಶನಿಗ್ರಹ ಉಂಗುರರಹಿತ ಗ್ರಹವಾಗಲಿದೆ ಎಂದು  ನೂತನ ವರದಿಯಲ್ಲಿ ಹೇಳಿದೆ.

23vichara2

ಶನಿಗ್ರಹ ಹಲವು ಸುತ್ತಿನ ಆಕರ್ಷಣೀಯ ಉಂಗುರಗಳನ್ನು ಹೊಂದಿದ್ದು, ಆ ಉಂಗುರಗಳು ಹಿಮ ಕಣಗಳಿಂದ ಕೂಡಿವೆ. ಉಂಗುರಗಳಲ್ಲಿಯ ಹಿಮ ಕಣಗಳು ನಿರಂತರವಾಗಿ ಕರಗಿ ಗ್ರಹದೊಳಕ್ಕೆ ಮಳೆಯ ರೂಪದಲ್ಲಿ ಸುರಿಯುತ್ತಿದೆ. ಹೀಗೆ ಸುರಿಯುವ ಮಳೆಯ ವೇಗದ ಪ್ರಮಾಣ ಎಷ್ಟಿದೆ ಎಂದರೆ, ಅರ್ಧ ಗಂಟೆಯಲ್ಲಿ ಸುರಿಯುವ ಈ ಮಳೆ ನೀರಿನಿಂದ  ಒಲಂಪಿಕ್ ಕ್ರೀಡಾಕೂಟಗಳಲ್ಲಿಯ ಒಂದು ಈಜುಕೊಳದಷ್ಟು ಕೊಳ ಶನಿಗ್ರಹದಲ್ಲಿ ನಿರ್ಮಾಣವಾಗುತ್ತದೆ ಎಂದು ಅಧ್ಯಯನ ತಂಡದ ವಿಜ್ಞಾನಿಗಳು ಹೇಳಿದ್ದಾರೆ.

ಇದೇ ವೇಗದಲ್ಲಿ  ಉಂಗುರಗಳು ಕರಗುವಿಕೆ ಮುಂದುವರೆದರೆ ಇನ್ನು ೩೦೦ ದಶಲಕ್ಷ ವರ್ಷಗಳಲ್ಲಿ ಉಂಗುರಗಳು ಸಂಪೂರ್ಣವಾಗಿ ಕರಗಿ ಮಾಯವಾಗುತ್ತವೆ

ಎಂದು ಅಧ್ಯಯನ ವರದಿಯಲ್ಲಿ ಹೇಳಿದ್ದರೆ, ಶನಿ ಗ್ರಹದ ಶೋಧನೆಯಲ್ಲಿ ತೊಡಗಿರುವ ಕ್ಯಾಸಿನಿ ಬಾಹ್ಯಾಕಾಶ ನೌಕೆ ೨೦೧೭ ರಲ್ಲಿ ಆ ಗ್ರಹದ ಉಂಗುರಗಳ ಮಧ್ಯೆ ಸಂಚರಿಸಿ ಉಂಗುರಗಳ ಒಳರಚನೆ ಕುರಿತ ಮಾಹಿತಿ ಸಂಗ್ರಹಿಸಿದೆ. ಈ ಮಾಹಿತಿಯ ಅಧ್ಯಯನದಿಂದ ಉಂಗುರಗಳು 100 ದಶಲಕ್ಷ ವರ್ಷಗಳ ಅವಧಿಯಲ್ಲಿ ಸಂಪೂರ್ಣವಾಗಿ ಕರಗಿ ಹೋಗುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ.

ನೂತನ ಅಧ್ಯಯನ ಉಂಗುರಗಳ ಆಯಸ್ಸನ್ನು ನಿರ್ಣಯಿಸುವ ದೃಷ್ಟಿಯಿಂದ ಮಹತ್ವಾದಾಗಿದೆ. ಸೌರ ಮಂಡಲದ ರಚನೆಯ ಕಾಲದಲ್ಲಿಯೇ ಈ ಗ್ರಹದ ಸುತ್ತಲೂ ಉಂಗುರಗಳು ನಿರ್ಮಾಣವಾಗಿವೆ ಎಂಬುದು ಒಂದು ಅಭಿಪ್ರಾಯವಾದರೇ ಈ ಉಂಗುರಗಳು ಸೌರ ಮಂಡಲ ರಚನೆಯ ನಂತರ ಗ್ರಹದ ಸುತ್ತಲೂ ರೂಪುಗೊಂಡಿವೆ ಎಂಬುದು ಇನ್ನೊಂದು ಅಭಿಪ್ರಾಯ. ಈ ಅಭಿಪ್ರಾಯದಂತೆ ಶನಿ ಗ್ರಹ ಸುತ್ತಲೂ ಉಂಗುರಗಳು ನಿರ್ಮಾಣವಾಗಿದ್ದಕ್ಕಿಂತ ಮುಂಚೆ ಅತ್ಯಂತ ಪ್ರಕಾಶಮಾನವಾಗಿತ್ತು ಎನ್ನುತ್ತದೆ.

ಶನಿಗ್ರಹ ಸೌರಮಂಡಲದಲ್ಲಿ 2ನೇ ಹಾಗೂ ದೊಡ್ಡ ಗ್ರಹ. ಇದರ ವ್ಯಾಸ 120,000 ಕಿ.ಮೀ. ಭೂಮಿಯ ಹತ್ತರಕಷ್ಟು ಇದು ದೊಡ್ಡದು. ಆದರೆ ತೂಕದಲ್ಲಿ ಮಾತ್ರ ಭೂಮಿಗಿಂತ 95 ಪಟ್ಟು ತೂಕ ಹೊಂದಿದೆ. ಶನಿ ಗ್ರಹಕ್ಕೆ 23 ಉಪಗ್ರಹಗಳು (ಚಂದ್ರರು) ಇದ್ದು ಅದರಲ್ಲಿ ಟೈಟಾನ್ ಅತ್ಯಂತ ದೊಡ್ಡ ಉಪಗ್ರಹವಾಗಿದೆ.

ಶನಿಗ್ರಹದ ಸುತ್ತಲೂ ಇರುವ 7 ತೆಳುವಾದ ಉಂಗುರಗಳು ಕ್ರಮೇಣ ಕರಗಿಹೋಗುತ್ತಿವೆ.ಹಿಮಕಣಗಳಿಂದ ಕೂಡಿರುವ ಈ ಉಂಗುರಗಳಿಂದ ಹಿಮಕಣಗಳು ವೇಗವಾಗಿ ಗ್ರಹದ ಒಳಕ್ಕೆ ಮಳೆ ರೂಪದಲ್ಲಿ ಸುರಿಯುತ್ತಿವೆ.  ಈ ಸುರಿಯುವಿಕೆ ಮುಂದುವರೆದರೆ 30 ದಶಲಕ್ಷ ವರ್ಷಗಳಲ್ಲಿ ಶನಿಗ್ರಹ ಉಂಗುರ ರಹಿತ ಗ್ರಹವಾಗುತ್ತದೆ ಎಂದು ನಾಸಾದ ಹೊಸ ಅಧ್ಯಯನ ವರದಿ ಹೇಳಿವೆ.

Leave a Comment