ಶತಾಯ ಗತಾಯ ಪೂರ್ಣ

ಕೆಲವು ಇಲ್ಲಿಯವರೆಗಿನ ಬಹುತೇಖ ಸಿನೆಮಾಗಳಲ್ಲಿ ತಾಯಿ-ಮಗನ ಬಾಂದವ್ಯ, ಅಮ್ಮನ ಎನ್ನುವ ಶಕ್ತಿಯ ಪ್ರೀತಿಯನ್ನು ಬಿಂಬಿಸಲಾಗಿದೆ  ಆದರೆ ಹೊಸಬರ ’ಶತಾಯ ಗತಾಯ’ಚಿತ್ರದಲ್ಲಿ ಸೆಂಟಿಮೆಂಟ್ ಇಲ್ಲದೆ ಆಕೆಯ ವಿರುದ್ದ ಮಗ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದರ ಸೆಸ್ಪನ್ಸ್, ಥ್ರಿಲ್ಲರ್ ಕತೆಯಾಗಿದೆ.

ಹಳ್ಳಿಯಲ್ಲಿ ನಡೆಯುವ ಕತೆಯಾಗಿದ್ದರಿಂದ ಹಿರಿಸಾವೆ, ಬೆಂಗಳೂರಿನ ಸುತ್ತ-ಮುತ್ತ ಚಿತ್ರೀಕರಣ ನಡೆಸಲಾಗಿದೆ. ಪ್ರೇಕ್ಷಕನಿಗೆ ಒಂದು ಟಿಕೆಟ್ ಕೊಂಡರೆ ಎರಡು ಕತೆಗಳನ್ನು ನೋಡಿದಂತೆ ಭಾಸವಾಗುತ್ತದಂತೆ.  ರವಿನಂದನ್ ಜೈನ್ ಸಂಗೀತದಲ್ಲಿ ಎರಡು ಹಾಡುಗಳು ಹಿಟ್ ಆಗಿರುವುದು ಪ್ಲಸ್ ಪಾಯಿಂಟ್.

ನಾಯಕ ರಘುರಾಮಪ್ಪ ಜಸ್ಟ್ ಪಾಸ್ ಚಿತ್ರದಲ್ಲಿ ನಟಿಸಿ, ಎಂಟು ವರ್ಷಗಳ ನಂತರ  ಅದೃಷ್ಟ ಪರೀಕ್ಷೆಗೆ ಆಖಾಡಕ್ಕೆ ಇಳಿದಿದ್ದಾರೆ. ಸೋನಿಕಾಗೌಡ ನಾಯಕಿಯಾಗಿ ಹೊಸ ಅನುಭವ. ತಾಯಿ ಪಾತ್ರಕ್ಕೆ ಮಂಜುಳರೆಡ್ಡಿ, ಖಳನಟನಾಗಿ ಶಿವುಪ್ರದೀಪ್ ಅಭಿನಯಿಸಿದ್ದಾರೆ

ಡಿಪ್ಲೋಮ್ ಮುಗಿಸಿ ಟ್ರಾನ್ಸ್‌ರುವ ಸಂದೀಪ್‌ಗೌಡ ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವದಿಂದ ಚಿತ್ರಕ್ಕೆ ಕತೆ,ಸಾಹಿತ್ಯ, ನಿರ್ದೇಶನ, ನಿರ್ಮಾಣ ಜೊತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಒಂದು ಕೋಟಿಯಲ್ಲಿ ಸಿದ್ದಗೊಂಡಿರುವ ಚಿತ್ರವನ್ನು ಸಚಿತ್ ಫಿಲಿಂಸ್‌ನ ವೆಂಕಟ್‌ಗೌಡ ಸುಮಾರು ೮೦ ಕೇಂದ್ರಗಳಲ್ಲಿ ಇದೇ ಶುಕ್ರವಾರದಂದು ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

Leave a Comment