ಶತಕೋಟಿ ಕ್ಲಬ್ ನತ್ತ ಅವನೇ ಶ್ರೀಮನ್ನಾರಾಯಣ : ರಕ್ಷಿತ್ ಶೆಟ್ಟಿ

ಹುಬ್ಬಳ್ಳಿ,ಜ.5- ಈಗಾಗಲೇ ಭರ್ಜರಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾ 100 ಕೋಟಿ ಕ್ಲಬ್ ಸೇರುವತ್ತ ಯಶಸ್ವಿ ದಾಪುಗಾಲು ಇಡುತ್ತಿದೆ ಎಂದು ಚಿತ್ರದ ನಟ ರಕ್ಷಿತ್ ಶೆಟ್ಟಿ ಹೇಳಿದರು.
‌        ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಸಿನಿಮಾದ ಯಶಸ್ವಿನ ಬಗ್ಗೆ ಮಾತನಾಡಿದ ಅವರು, ಯಾವುದೇ ಒಂದು ಸಿನಿಮಾ ಗೆಲುವು ಸಾಧಿಸಲು ಉತ್ತರ ಕರ್ನಾಟಕ ಭಾಗ ಬೆನ್ನೆಲುಬು ಆಗಿದ್ದು, ಅದೇ ರೀತಿ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನು ಗೆಲಿಸಿದ್ದಾರೆ. ಅಲ್ಲದೇ ಚಿತ್ರದ ಚಿತ್ರೀಕರಣವನ್ನು ಉತ್ತರ ಕರ್ನಾಟಕ ಭಾಗದಲ್ಲೂ ಮಾಡಲಾಗಿದ್ದು, ಸಿನಿಮಾ 10 ದಿನದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡುವಲ್ಲಿ ನಡೆಯುತ್ತಿದ್ದು, ತೆಲಗು, ತಮಿಳು, ಮಳಿಯಾಳಂ ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಜ.17 ರಂದು ಹಿಂದಿಯಲ್ಲಿ ಬಿಡುಗಡೆಯಾಗಲಿದೆ ಎಂದರು.
ಚಿತ್ರದ ಕಳನಟ ಬಾಲಾಜಿ ಮಾತನಾಡಿ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನು ರಾಜ್ಯ, ದೇಶ ಅಷ್ಟೇ ಅಲ್ಲದೇ ಹೊರ ದೇಶದಲ್ಲೂ ಜನರು ಚಿತ್ರವನ್ನು ವಿಕ್ಷಣೆ ಮಾಡುತ್ತಿದ್ದು,

ಕೆನಡಾದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ಮೂಲ ಕಾರಣ ಚಿತ್ರದ ಚಿತ್ರಿಕಥೆ. ಇನ್ನೂ ಹುಬ್ಬಳ್ಳಿ ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ಯಾವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಅದು ರೆಕಾರ್ಡ್ ಸಿನಿಮಾ ಆಗುವುದು ಎಂಬ ನಂಬಿಸಿ ಇದೆ ಅದೇ ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮೋದ ಶೆಟ್ಟಿ, ನಿರ್ದೇಶಕ ಸಚಿನ ಸೇರಿದಂತೆ ಮುಂತಾದವರು ಇದ್ದರು.

Leave a Comment