ಶತಕದತ್ತ ರಕ್ತದಾನಿ ದೇವಣ್ಣ

ವೀರಭದ್ರಗೌಡ ಎನ್
* ಇಂದು ವಿಶ್ವ ರಕ್ತದಾನಿಗಳ ದಿನ.
* ವೃತ್ತಿ ಬ್ಯಾಂಕ್ ಉದ್ಯೋಗಿ ಪ್ರವೃತ್ತಿ ರಕ್ತದಾನ ಶಿಬಿರಗಳ ಆಯೋಜನೆ.
* 108 ಬಾರಿ ರಕ್ತದಾನ ಮಾಡುವ ಆಶಯ.
* 524 ರಕ್ತದಾನ ಶಿಬಿರಗಳ ಆಯೋಜನೆ.

ಬಳ್ಳಾರಿ, ಜೂ.14: ಅಪಘಾತದಲ್ಲಿ ಗಾಯಗೊಂಡವರು, ಅನಾರೋಗ್ಯ ಪೀಡಿತರು, ಹೆರಿಗೆ ಸಂದರ್ಭ ಮೊದಲಾದವರಿಗೆ ರಕ್ತದ ಅವಶ್ಯಕತೆ ಇದೆ. ಅದನ್ನು ಪೂರೈಸುವವರು ರಕ್ತದಾನಿಗಳು. ಅವರ ಮಹತ್ವವನ್ನು ಅರಿತು ಇಂದು ವಿಶ್ವ ರಕ್ತದಾಣಿಗಳ ದಿನ ಆಚರಿಸಲಾಗುತ್ತಿದೆ.

ಹೆಚ್ಚಿರುವ ಜನಸಂಖ್ಯೆ ಮತ್ತು ಅಪಘಾತಗಳು, ಜೀವನ ವಿಧಾನದಿಂದ ಉಂಟಾಗುತ್ತಿರುವ ಅನೇಮಿಯ ರಕ್ತ ಹೀನತೆಯಿಂದ ರಕ್ತಕ್ಕೆ ಎಲ್ಲಿಲ್ಲದ ಬೇಡಿಕೆ ಉಂಟಾಗುತ್ತಿದೆ. ನಗರದ ಎಸ್‍ಬಿಐ ಬ್ಯಾಂಕ್‍ನ ಪ್ರಧಾನ ಕಚೇರಿಯಲ್ಲಿ ವಿಶೇಷ ಸಹಾಯಕ ಹುದ್ದೆಯಲ್ಲಿರುವ ಬಿ.ದೇವಣ್ಣ ಬಿ ಪಾಸಿಟಿವ್ ರಕ್ತದ ಗುಂಪು ಹೊಂದಿರುವ ವ್ಯಕ್ತಿ. ಸ್ವತಃ ರಕ್ತದಾನ ರಕ್ತದಾನ ಮಾಡುವುದರಲ್ಲಿ ಶತಕದತ್ತ ಸಾಗಿದ್ದಾರೆ.

ನಗರದಲ್ಲಿ 2002ರಿಂದ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಮೂಲಕ ರಕ್ತದಾನ ಶಿಬಿರಗಳನ್ನ ಆಯೋಜಿಸುತ್ತಾ ಬಂದಿರುವ ಅವರು, ಈ ವರೆಗೆ 524 ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ. ಜೊತೆಗೆ ಆರೋಗ್ಯ ತಪಾಸಣಾ ಶಿಬಿರ, ಕಣ್ಣು ತಪಾಸಣಾ ಶಿಬಿರ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿದ್ದಾರೆ.2012ರಿಂದ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ನಗರದ ನಿವಾಸಿಗಳೇ ಆದ ದೇವಣ್ಣ ಅವರಿಗೆ ಈಗ 56 ವರ್ಷ, ಅವರು 1982ರಲ್ಲಿ ತಾವು ಐಟಿಐ ವಿದ್ಯಾಭ್ಯಾಸ ಮಾಡುವಾಗ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದ. ಆಗ ತಮ್ಮ ಸೇಹಿತರು ಗಾಯಗೊಂಡಿದ್ದ ವ್ಯಕ್ತಿಗೆ ರಕ್ತದಾನ ಮಾಡಿದ್ದರು. ಈ ವಿಚಾರ ಕಾಲೇಜಿನಲ್ಲಿ ಶ್ಲಾಘನೆಗೆ ಕಾರಣವಾಗಿತ್ತು. ಇದರಿಂದ ಪ್ರೇರೇಪಣೆಗೊಂಡ ಅವರು ರಕ್ತದಾನ ಮಾಡಲು ನಿರ್ಧರಿಸಿದರಂತೆ. ತಮ್ಮ 18ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಗೆ ಮೊದಲ ಬಾರಿಗೆ ರಕ್ತದಾನ ಮಾಡಿದರು. ಅಲ್ಲಿಂದ ಇಲ್ಲಿವರೆಗೆ 97 ಬಾರಿ ರಕ್ತದಾನ ಮಾಡಿದ್ದಾರೆ.

ಒಮ್ಮೆ ಸಂಗ್ರಹಿಸಿದ ರಕ್ತ 30 ದಿನಗಳ ಒಳಗೆ ಮಾತ್ರ ಬಳಸ ಬಹುದಾಗಿದೆ. ಅಗತ್ಯಕ್ಕೆ ಅನುಗುಣವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುವವರಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿ ಕಂಡುಬರುತ್ತದೆ. ಗ್ರಾಮೀಣ ಪ್ರದೇಶದ ಮಹಿಳೆಯರು ರಕ್ತಹೀನತೆಯಿಂದ ಹೆಚ್ಚಾಗಿ ಬಳಲುತ್ತಿದ್ದಾರೆ. ಎ-, ಬಿ-, ಎಬಿ-, ಒ- ರಕ್ತ ದ ಲಭ್ಯತೆ ಅಪರೂಪ. ಇದರಿಂದಾಗಿ ಈ ರಕ್ತದ ಗುಂಪು ಹೊಂದಿದವರ ರಕ್ತವನ್ನು ರಕ್ತದಾನ ಶಿಬಿರಗಳಲ್ಲಿ ಪಡೆಯುವುದಿಲ್ಲ. ಬದಲಿಗೆ ಅವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸಂಗ್ರಹಿಸಿ ತುರ್ತು ಸಂದರ್ಭದಲ್ಲಿ ಕರೆ ಮಾಡಿ ಸಂಗ್ರಹಿಸಲಾಗುತ್ತದೆ.

ರಕ್ತದಾನ ಕುರಿತಂತೆ ಮಾತನಾಡುವ ದೇವಣ್ಣ ಈ ಮೊದಲು ರಕ್ತದಾನಕ್ಕೆ ಹೆಚ್ಚನದಾಗಿ ಜನತೆ ಮುಂದೆ ಬರುತ್ತಿರಲಿಲ್ಲ. ಅವರ ಸಂಬಂಧೀಗಳಿಗೆ ಅವಶ್ಯವಾದಾಗ ಮಾತ್ರ ರಕ್ತದಾನ ಮಾಡುತ್ತಿದ್ದೆರು. ಇದರಿಂದಾಗಿ ರಕ್ತದ ಕೊರತೆ ಕಾಡುತ್ತಿತ್ತು. ಅದಕ್ಕಾಗಿ ರಕ್ತದಾನದ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಸರಕಾರ ಮತ್ತು ಸಂಘ ಸಂಸ್ಥೆಗಳಿಂದ ಆಗಿರುವುದರಿಂದ ಈಗ ಆ ಸಮಸ್ಯೆ ಕಡಿಮೆಯಾಗಿದೆ. ಅನೇಕ ಕಡೆ ರಕ್ತದಾನಗಳ ಶೀಬಿರಗಳು ನಡೆಯುತ್ತಿವೆ, ಜಾತ್ರೆ, ಸಭೆ, ಸಮಾರಂಭಗಳ ಸಂದರ್ಭ ಅದರಲ್ಲೂ ಸ್ವಾಮೀಜಿಗಳ ತುಲಾಭಾರವನ್ನೂ ರಕ್ತ ದಾನ ಮಾಡುವ ಮೂಲಕ ನಡೆಸುತ್ರತಿರುವುದು ಒಳ್ಳೆಯ ಬೆಳವಣಿಗೆಯಾಗಿ ರಕ್ತ ದಾನದ ಸ್ವರೂಪ ಹೆಚ್ಚಾಗಿದೆನ್ನುತಾರೆ ಅವರು.

ರಕ್ತದಾನ ಮಾಡುವ 50 ಜನರು ಗುಂಪುನ್ನು ರಚಿಸಿಕೊಂಡಿರುವೆ. ಬೇಡಿಕೆಗೆ ಅನುಗುಣವಾಗಿ ರಕ್ತ ದಾನ ನಮ್ಮ ಗುಂಪಿನ ಸದಸ್ಯರು ಸಿದ್ದರಿದ್ದಾರೆ. ದೂರದ ಊರುಗಳಿಲ್ಲಿನ ಆಸ್ಪತ್ರೆಗೆ ದಾಖಲಾದವರಿಗೂ ರಕ್ತದ ಅಗತ್ಯತೆ ಇದ್ದಾಗ ಅಲ್ಲಿಗೆ ಹೋಗಿ ರಕ್ತದಾಣ ಮಾಡಿ ಬಂದಿದ್ದಾರೆ ನಮ್ಮ ಸದಸ್ಯರು ಎನ್ನುತ್ತಾರೆ ದೇವಣ್ಣ.

ಪ್ರಶಸ್ತಿಗಳು:
ರೆಡ್‍ಕ್ರಾಸ್ ಸಂಸ್ಥೆಯ ರಾಜ್ಯ, ರಾಷ್ಟ್ರೀಯ ಪುರಸ್ಕಾರ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ದೇವಣ್ಣ ಸನ್ಮಾನಿತರಾಗಿದ್ದಾರೆ. ರೆಡ್‍ಕ್ರಾಸ್ ಸಂಸ್ಥೆಯ ರಕ್ತದಾನ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಮಾನವೀಯತೆಯ ಚಾಂಪಿಯನ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ರಕ್ತದಾನ ಮಾಡುವುದರ ಜತೆಗೆ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಐದು ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಿದ ಸಾಧನೆ ಗುರುತಿಸಿ ಭಾರತೀಯ ಹಾಗೂ ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆಯ ಪುರಸ್ಕಾರ ದೊರೆತಿದೆ.
ರಕ್ತದಾನದ ಬಗ್ಗೆ ಜನರಲ್ಲಿ ಈಗ ಸಾಕಷ್ಟು ಜಾಗೃತಿ ಮೂಡಿದೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿದೆ. ರಕ್ತದಾನ ಶಿಬಿರಗಳಲ್ಲಿ ಅವರು ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಬೇಕು. ನಾನು ನನ್ನ ಜೀವಿತ ಅವಧಿಯಲ್ಲಿ 108 ಬಾರಿ ರಕ್ತದಾಣ ಮಾಡಬೇಕೆಂಬ ಆಶಯ ನನ್ನದಾಗಿದೆ
ಬಿ.ದೇವಣ್ಣ, ರಕ್ತದಾನಿ ಬಳ್ಳಾರಿ
ಒಬ್ಬ ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಿದರೆ ಆತನ ಆರೋಗ್ಯ ಮತ್ತಷು ಹೆಚ್ಚಲಿದೆ. ರಕ್ತದಾನ ಮಾಡುವುದರಿಂದ ಅನೇಕ ಜೀವಗಳ ರಕ್ಷಣೆಗೆ ಅದು ಸಹಕಾರಿಯಾಗಲಿದೆ. ರಕ್ತದಾಣ ಮಾಡುವುದನ್ನು ನಮ್ಮ ಜನತೆ ಬದುಕಿನ ಒಂದು ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಬೇಕು.
ಡಾ.ಪ್ರಕಾಶ್ ಪಾಟೀಲ್, ಮಾಲ್ಯಂ.
ರಕ್ತ ಭಂಡಾರಗಳು ರಕ್ತ ಅವಶ್ಯವಿದ್ದವರಿಂದ ಹೆಚ್ಚನ ಹಣ ವಸೂಲಿ ಮಾಡಲಾಗುತ್ತದೆ ಎಂಬ ಆರೋಪಗಳು ಇವೆ. ಅದನ್ನು ಕೆಲವರು ಮಾಡುತ್ತಿರಬಹುದು. ಆದರೆ ನಾವು ಸರಕಾರ ನಿಗಧೀ ಮಾಡಿದಷ್ಟನ್ನು ಮಾತ್ರ ಶುಲ್ಕ ಪಡೆಯುತ್ತೇವೆ. ರಕ್ತದ ಅವಶ್ಯ ಇರುವವರು ವೈದ್ಯರ ಶಿಫಾರಸ್ಸು ಮತ್ತು ಮಾರ್ಗದರ್ಶನದಂತೆ. ಯಾವ ಸಮಯದಲ್ಲಿ ಬಂದರೂ ಬಂಡಾರದಲ್ಲಿ ಸಂಗ್ರಹವಿದ್ದ ರಕ್ತವನ್ನು ನಿಗಧಿತ ಶೂಲ್ಕ ಪಾವತಿಸಿ ಪಡೆಯಬಹುದು
ಡಾ.ಮುಖೇಶ್ ಕುಡುಪಲಿ. ಸ್ಪಂದನ ರಕ್ತ ಭಂಡಾರ ಬಳ್ಳಾರಿ.

Leave a Comment