ಶಕ್ತಿನಗರ : 150ನೇ ಗಾಂಧಿ ಜಯಂತಿಯ ಸಂಕಲ್ಪ ಯಾತ್ರೆ

ರಾಯಚೂರು.ಅ.20- ದೇಶದಲ್ಲಿ ಒಂದೆಡೆ ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ ಚಟುವಟಿಕೆ ನಡೆದಿದ್ದರೇ, ಮತ್ತೊಂದೆಡೆ ರಾಯಚೂರು ಶಾಖೋತ್ಪನ್ನ ಕೇಂದ್ರವೂ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಕೋಟ್ಯಾಂತರ ರೂ. ಲೂಟಿ ಮಾಡುತ್ತಿದೆಂದು ಸಂಸದ ರಾಜಾ ಅಮರೇಶ್ವರ ನಾಯಕ ಅವರು ನೇರವಾಗಿ ಆರೋಪಿಸಿದರು.
ಅವರಿಂದು ಶಕ್ತಿನಗರದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 150ನೇ ಜಯಂತ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಕ್ಷದ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಪರಿಸರ ರಕ್ಷಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಕೇಂದ್ರದ ಸ್ಥಾಪನೆಯಿಂದ ಇಲ್ಲಿಯ ಜನರು ತೀವ್ರ ಪರಿಸರ ಸಮಸ್ಯೆಗೆ ಗುರಿಯಾಗುವಂತಾಗಿದೆ.
ಪರಿಸರ ರಕ್ಷಣೆ ಹೆಸರಿನಲ್ಲಿ ಕೋಟ್ಯಾಂತರ ರೂ. ಅನುದಾನ ದುರ್ಬಳಕೆಯಾಗುತ್ತಿದೆ. ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಗಿಡ-ಮರ ಬೆಳೆಸುವ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಇತ್ತೀಚಿಗೆ ನಡೆದ ಕೆಡಿಪಿ ಸಭೆಯಲ್ಲಿ ಈ ಕುರಿತು ನಾನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಗಮನಕ್ಕೆ ತಂದಿದೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿಯ ಜನರಿಗೆ ಪೂರಕ ಸೌಲಭ್ಯ ಒದಗಿಸುವಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸಂಪೂರ್ಣ ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಪರಿಸರ ರಕ್ಷಣೆಯತ್ತ ಕೆಪಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮಹಾತ್ಮಗಾಂಧಿ ಅವರ ಆದರ್ಶ ಪ್ರತಿಯೊಬ್ಬರು ರೂಢಿಸಿಕೊಂಡು ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರು ಮಾತನಾಡುತ್ತಾ, ಮಹಾತ್ಮಗಾಂಧಿ ಅವರ ಗ್ರಾಮ ಸ್ವರಾಜ್ಯ ಮತ್ತು ಗ್ರಾಮ ರಕ್ಷಣೆಯ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ. ಇಂತಹ ಕಾರ್ಯಕ್ರಮ ಮೂಲಕ ಸಮಗ್ರಾಭಿವೃದ್ಧಿ ಸಾಧ್ಯವೆಂದು ಹೇಳಿದರು.
ಶಕ್ತಿನಗರ 1ನೇ ಕ್ರಾಸನಿಂದ ಮುಖ್ಯ ರಸ್ತೆಗಳಲ್ಲಿ ದೇವಸೂಗೂರು, ಸೂಗೂರೇಶ್ವರ ದೇವಸ್ಥಾನವರೆಗೂ ಪಾದಯಾತ್ರೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಎನ್.ಶಂಕ್ರಪ್ಪ, ಎ.ಪಾಪಾರೆಡ್ಡಿ, ಕಡಗೋಳ ಆಂಜಿನೇಯ್ಯ, ಜಗದೀಶ್ ವಕೀಲರು, ಸತೀಶ್, ಕೆ.ಎಂ.ಪಾಟೀಲ್, ರವೀಂದ್ರ ಜಲ್ದಾರ್, ವೀರೇಂದ್ರ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment