ಶಕಿಬ್ ಅಲ್ ಹಸನ್ ಅಜೇಯ ಅರ್ಧ ಶತಕ ಬಾಂಗ್ಲಾದೇಶ ೪ಕ್ಕೆ ೧೯೬

ಹೈದರಾಬಾದ್, ಫೆ.೧೧- ಶಕಿಬ್ ಅಲ್ ಹಸನ್ ಅವರ ಅರ್ಧ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡದವರು ಏಕ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನ ಊಟದ ನಂತರ ಒಟ್ಟು ೫೫ ಓವರ್‌ಗಳಲ್ಲಿ ೪ ವಿಕೆಟ್‌ಗೆ ೧೯೬ ರನ್ ಮಾಡಿದ್ದರು.
ಶಕಿಬ್ ಅಲ್ ಹಸನ್ (೮೭ ಎಸೆಗಳಲ್ಲಿ ೧೩ ಬೌಂಡರಿಗಳಿದ್ದ ೭೩) ಹಾಗೂ ಕ್ಯಾಪ್ಟನ್ ಮುಶ್ಫಿಕರ್ ರಹೀಂ (೬೬ ಎಸೆತಗಳಲ್ಲಿ ೪ ಬೌಂಡರಿಗಳಿದ್ದ ೩೩) ಮುರಿಯದ ೫ನೇ ವಿಕೆಟ್‌ಗೆ ೨೦.೩ ಓವರ್‌ಗಳಲ್ಲಿ ೮೭ ರನ್ ಸೇರಿಸಿ ಆಡುತ್ತಿದ್ದರು.
ಮೊದಲ ದಿನ ಸೌಮ್ಯ ಸರ್ಕಾರ್ ವಿಕೆಟ್ ಪಡೆದಿದ್ದ ಉಮೇಶ್ ಯಾದವ್ ಇಂದು ಒಂದು ರನ್ ಔಟ್‌ಗೆ ನೆರವಾಗಿದ್ದೇ ಅಲ್ಲದೆ ಮೊಮಿನುಲ್ ಹಕ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿ ಗಮನಾರ್ಹ ಪ್ರದರ್ಶನ ನೀಡಿದರು.
ಶುಕ್ರವಾರ ೧ ವಿಕೆಟ್ ನಷ್ಟಕ್ಕೆ ೪೧ ರನ್ ಮಾಡಿದ್ದ ಬಾಗ್ಲಾದೇಶ ಇಂದು ೩ನೇ ಓವರ್‌ನಲ್ಲಿ ತಮೀಮ್ ಇಕ್ಬಾಲ್ ಅವರನ್ನು ಕಳೆದುಕೊಂಡಿತು; ಭುವನೇಶ್ವರ್ ಬೌಲಿಂಗ್‌ನಲ್ಲಿ ಮೊಮಿನುಲ್ ಹಕ್ ಚೆಂಡನ್ನು ಸ್ಕ್ವೆಯರ್ ಲೆಗ್ ಕಡೆ ಕಳುಹಿಸಿ ಒಂದು ರನ್ ತೆಗೆದುಕೊಂಡು ಎರಡನೇ ರನ್ ಪಡೆಯಲು ನಿರ್ಧರಿಸಿದರಾದರೂ ನಂತರ ಹಿಂದೇಟು ಹಾಕಿದರು; ಬೌಂಡರಿ ಗೆರೆಯಿಂದ ಓಡಿ ಬಂದ ಉಮೇಶ್ ಯಾದವ್ ಬೌಲರ್ ತುದಿಗೆ ಎಸೆದ ಚೆಂಡನ್ನು ಪಡೆದ ಭುವನೇಶ್ವರ್, ಬೇಲ್ಸ್ ಎಗುರಿಸಿದಾಗ ತಮೀಮ್ ಕ್ರೀಸ್ ತಲುಪಿರಲಿಲ್ಲ.
ಉಮೇಶ್ ಯಾದವ್ ತರುವಾಯ ಬಾಂಗ್ಲಾದೇಶದ ಕಡೆ ದೀರ್ಘ ಇನಿಂಗ್ಸ್ ಆಡುವ ಸಾಮರ್ಥ್ಯದ ಆಟಗಾರ ಮೊಮಿನಲ್ ಹಕ್ (೩೬ ಎಸೆಗಳಲ್ಲಿ ೧ ಬೌಂಡರಿಯಿದ್ದ ೧೨) ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.
ಮಹ್ಮುದುಲ್ಲಾ (೫೭ ಎಸೆಗಳಲ್ಲಿ ೪ ಬೌಂಡರಿಗಳಿದ್ದ ೨೮) ಹಾಗೂ ಶಕಿಬ್ ಅಲ್ ಹಸನ್ (ಎಸೆತಗಳಲ್ಲಿ ಬೌಂಡರಿಗಳಿದ್ದ ) ಅವರು ೪ನೇ ವಿಕೆಟ್‌ಗೆ ೪೫ ರನ್ ಸೇರಿಸಿ ಪ್ರವಾಸಿಗರ ಇನಿಂಗ್ಸ್‌ಗೆ ಚೇತರಿಕೆ ನೀಡುತ್ತಿದ್ದಾಗ ಇಶಾಂತ್ ಶರ್ಮ, ಮಹ್ಮುದುಲ್ಲಾ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದರು. ವಿಲ್ಸನ್ ಅವರ ತೀರ್ಪನ್ನು ಮರು ಪರಿಶೀಲಿಸುವಂತೆ ಮಹ್ಮುದುಲ್ಲಾ ಮನವಿಯನ್ನು ‘ಹಾಕ್‌ಐ’ ಪರಿಶೀಲಿಸಿದ ಮೂರನೆ ಅಂಪೈರ್ ವಿಲ್ಸನ್ ತೀರ್ಪನ್ನು ಎತ್ತಿ ಹಿಡಿದರು.

ಸ್ಕೋರು ವಿವರ
ಭಾರತ, ೧ನೇ ಇನಿಂಗ್ಸ್:
೬ ವಿಕೆಟ್‌ಗೆ ೬೮೭ ಡಿಕ್ಲೇರ್ಡ್
ಬಾಂಗ್ಲಾದೇಶ, ೧ನೇ ಇನಿಂಗ್ಸ್:
೪ ವಿಕೆಟ್‌ಗೆ ೧೯೬
(ಶುಕ್ರವಾರ ೧ ವಿಕೆಟ್‌ಗೆ ೪೧)
ತಮೀಮ್ ಇಕ್ಬಾಲ್ ರನ್ ಔಟ್ (ಉಮೇಶ್ ಯಾದವ್/ ಭುವನೇಶ್ವರ್ ಕುಮಾರ್) ೨೪, ಮೊಮಿನುಲ್ ಹಕ್ ಎಲ್‌ಬಿಡಬ್ಲ್ಯು ಬಿ ಉಮೇಶ್ ಯಾದವ್ ೧೨, ಮಹ್ಮುದುಲ್ಲಾ ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮ ೨೮, ಶಕಿಬ್ ಅಲ್ ಹಸನ್ ಬ್ಯಾಟಿಂಗ್ ೭೩, ಮುಶ್ಫಿಕರ್ ರಹೀಂ ಬ್ಯಾಟಿಂಗ್ ೩೩, ಇತರೆ (ಲೆಬೈ ೧೧) ೧೧
ವಿಕೆಟ್ ಪತನ: ೧-೩೮ (ಸೌಮ್ಯ ಸರ್ಕಾರ್, ೧೧.೨), ೨-೪೪ (ತಮೀಮ್ ಇಕ್ಬಾಲ್, ೧೬.೪), ೩-೬೪ (ಮೊಮಿನುಲ್ ಹಕ್, ೨೪.೧), ೪-೧೦೯ (ಮಹ್ಮುದುಲ್ಲಾ, ೩೪.೪)
ಬೌಲಿಂಗ್: ಭುವನೇಶ್ವರ್ ಕುಮಾರ್ ೧೨-೩-೩೪-೦; ಇಶಾಂತ್ ಶರ್ಮ ೧೦-೩-೩೮-೧; ಆರ್.ಅಶ್ವಿನ್ ೧೧-೩-೩೨-೦; ಉಮೇಶ್ ಯಾದವ್ ೧೪-೨-೫೫-೨; ರವೀಂದ್ರ ಜಡೇಜ ೮-೨-೨೬-೦
ಕ್ಯಾಪ್ಷನ್
ಚಿತ್ರ ೧: ಎರಡು ವಿಕೆಟ್ ಗಳಿಸಿ ಒಂದು ರನ್ ಔಟ್‌ಗೆ ನೆರವಾದ ಉಮೇಶ್ ಯಾದವ್ ಅವರನ್ನು ಸಹ ಆಟಗಾರರು ಅಭಿನಂದಿಸುತ್ತಿರುವುದು

Leave a Comment