ಶಂಕಿತ ಡೆಂಗೆಗೆ-ಬಾಲಕಿ ಬಲಿ

ಹೊಸಪೇಟೆ.ನ.17 ಶಂಕಿತ ಡೆಂಗೆಗೆ ಬಾಲಕಿಯೊಬ್ಬರು ಬಲಿಯಾಗಿರುವ ಘಟನೆ ನಗರದಲ್ಲಿ ಜರುಗಿದೆ.

ಸ್ಥಳೀಯ ಆಕಾಶವಾಣಿ ಪ್ರದೇಶದ ನಿವಾಸಿ, ಕೆ.ಸಿದ್ದಪ್ಪ ಎಂಬುವವರ ಪುತ್ರಿ ಕಾವ್ಯ(17) ಎಂಬ ಬಾಲಕಿಯೇ ಶಂಕಿತ ಡೆಂಗೆ ಜ್ವರದಿಂದ ಮೃತಪಟ್ಟ ದುರ್ದೈವಿಯಾಗಿದ್ದಾಳೆ.

ಕಳೆದ 15 ದಿನಗಳಿಂದ ಡೆಂಗೆ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಬಳ್ಳಾರಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಬಾಲಕಿ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಮನೆಗೆ ಕರೆ ತರಲಾಗಿತ್ತು. ಆದರೆ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಾಲಕಿಯನ್ನು ಮತ್ತೆ ಬಳ್ಳಾರಿಗೆ ಕರೆದುಕೊಂಡು ಹೋಗುತ್ತಿರುವಾಗ ತೋರಣಗಲ್ಲು ಬಳಿ ಬುಧವಾರ ಮೃತಪಟ್ಟಿದ್ದಾರೆ.
ಶಂಕಿತ ಡೆಂಗೆ ಜ್ವರದಿಂದ ಬಳಲುತ್ತಿದ್ದ ಬಾಲಕಿ ಕಾವ್ಯ ಮೃತಪಟ್ಟಿರುವ ಬಗ್ಗೆ ಮಾಹಿತಿಯಿದ್ದು. ಈ ಕುರಿತು ಆಸ್ಪತ್ರೆಯಿಂದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ತಿಳಿಸಿದ್ದಾರೆ.

Leave a Comment