ವ್ಯಸನಸಿಂದ ದೂರವಿರಲು ವಿದಾಯದ ಪಾಠ

ಬೆಂಗಳೂರು,ಆ.೩೦-ನಗರ ಪೊಲೀಸರು ದೇಶದ ಯುವ ಪೀಳಿಗೆಗೆ ಮಾದಕ ವ್ಯಸನದಿಂದ ದೂರವಿರಲು ವಿದಾಯದ ಪಾಠ ಮಾಡಿದ್ದಾರೆ

ಓದಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕಾದ ಯುವ ಪೀಳಿಗೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಕುರಿತು ಜಾಗೃತಿ ಮೂಡಿಸಲು ನಗರ ಪೊಲೀಸರು ವಿದಾಯ ಎನ್ನು ಕಿರು ಚಿತ್ರವೊಂದನ್ನು ತಯಾರಿಸಿದ್ದಾರೆ.
ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ದುಶ್ಚಟಗಳುಳ್ಳ ಸ್ನೇಹಿತರ ಸಂಗ ಸೇರಿ ತನ್ನ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಂಡ, ಮಾದಕ ವ್ಯಸನಗಳಿಂದ ವಿದ್ಯಾರ್ಥಿಗಳು, ಯುವ ಸಮುದಾಯ ದೂರ ಇರಬೇಕೆಂಬ ಸಂದೇಶ ಸಾರುವ ಈ ಕಿರುಚಿತ್ರವನ್ನು ಸಾಮಾಜಿಕ ಜಾಲತಣದಲ್ಲಿ ಹಾಕಲಾಗಿದೆ.
ನಗರ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆ ಹಾಗೂ ಯೂ ಟ್ಯೂಬ್’ನಲ್ಲಿ ಹಾಕುವ ಮೂಲಕ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಬೆಂಗಳೂರು ಪೊಲೀಸರು ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ

Leave a Comment