ವ್ಯಕ್ತಿ ಅನುಮಾನಾಸ್ಪದ ಸಾವು : ಕೊಲೆ ಶಂಕೆ

ಮೈಸೂರು, ಆ. 24. ಅನುಮಾನಾಸ್ಪದವಾಗಿ ವ್ಯಕ್ತಿ ಯೋರ್ವರು ಸಾವನ್ನಪ್ಪಿದ್ದಾರೆ. ಮೃತದೇಹ ಸಾತಗಳ್ಳಿ ಪಟ್ಟಲ್ಲಮ್ಮದ ದೇವಸ್ಥಾನದ ಸಮೀಪ ಕಂಡು ಬಂದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಸಾತಗಳ್ಳಿ ಗ್ರಾಮದ ರಾಜಶೇಖರ್ ಎಂಬವರೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು,ತಲೆಗೆ ಹೊಡೆದು ಹತ್ಯೆ ಗೈದಿರುವ ಶಂಕೆ ವ್ಯಕ್ತವಾಗಿದೆ. ಇವರು ಖಾಸಗಿ ಶಾಲೆಯಲ್ಲಿ ಕಾರು ಚಾಲಕರಾಗಿದ್ದರು. ಸ್ವಂತ ವ್ಯಾನ್ ಇಟ್ಟುಕೊಂಡು ಶಾಲಾ ವಿದ್ಯಾರ್ಥಿಗಳನ್ನು ಕರೆತರುವುದು, ಶಾಲೆಗೆ ಬಿಟ್ಟು ಬರುವುದು ಮಾಡುತ್ತಿದ್ದರು. ಕಳೆದೊಂದು ವರ್ಷದ ಹಿಂದೆ ಅವರ ಪತ್ನಿ ಎಚ್1ಎನ್1 ಜ್ವರದಿಂದ ಸಾವನ್ನಪ್ಪಿದ್ದರು. ಇದೀಗ ರಾಜಶೇಖರ್ ನಿಧನದಿಂದ ಅವರಿಗಿದ್ದ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಇನ್ಸಪೆಕ್ಟರ್ ಜಯಪ್ರಕಾಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment