ವ್ಯಕ್ತಿಯ ಸಂಶಯಾಸ್ಪದ ಸಾವು

ಕುಣಿಗಲ್, ಜು. ೧೬- ವ್ಯಕ್ತಿಯೊಬ್ಬರು ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚಿಕ್ಕಮಾವತ್ತೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಾವತ್ತೂರು ಗ್ರಾಮದ ಶಿವಕುಮಾರ್ (40) ಎಂಬುವರೇ ಮೃತಪಟ್ಟಿರುವ ದುರ್ದೈವಿ. ಇತ್ತೀಚೆಗೆ ಸಂತೆಮಾವತ್ತೂರು ಗ್ರಾಮದ ಬಾರ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದರೆನ್ನಲಾಗಿದೆ.

ಸಿದ್ದಯ್ಯನಕೆರೆ ಗ್ರಾಮಕ್ಕೆ ತೆರಳಿ ಗಲಾಟೆ ನಡೆಸಿದ ಮನೆಯವರ ಜತೆ ಮತ್ತೊಮ್ಮೆ ಜಗಳ ಮಾಡಿಕೊಂಡಿದ್ದರೆನ್ನಲಾಗಿದ್ದು, ಈ ಸಂಬಂಧ ಪ್ರಕರಣ ಸಹ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment