ವ್ಯಕ್ತಿಯೊಬ್ಬನ ಜೀವ ಉಳಿಸಿದ ಹೆವೀ ಟ್ರಾಫಿಕ್ಕು

ಬೆಂಗಳೂರು,ನ.21: ಎಲ್ಲರಿಂದಲೂ ಸಮಾನವಾಗಿ ದ್ವೇಷಿಸಲ್ಪಡುವ ಟ್ರಾಫಿಕ್ಕು ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಕಾಪಾಡಿದೆ.

ಹೌದು, ದೆಹಲಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಗಿಜಿ ಗುಡುವ ಟ್ರಾಫಿಕ್ಕಿನಿಂದಾಗಿ ವ್ಯಕ್ತಿಯೊಬ್ಬ ಅಪಹರಣಕಾರರಿಂದ ಬಚಾವ್ ಆಗಿದ್ದಾನೆ.

ದೆಹಲಿಯ ಸಚಿನ್ ಪಾಠಕ್ ಎಂಬ ವ್ಯಕ್ತಿಯನ್ನು ಸೋಮವಾರ ಕೆಲವು ದುಷ್ಕರ್ಮಿಗಳು ಓಕ್ಲಾ ಬರ್ಡ್ ಮೆಟ್ರೋ ಸ್ಟೇಷನ್ ಬಳಿ ಅಪಹರಣ ಮಾಡಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಅಲ್ಲಿಂದ ಮುಂದೆ ಕಲಿಂಡ್‌ಕುಂಜ್ ಗಡೆ ಹೊರಟಿದ್ದಾರೆ ಆದರೆ ಅಲ್ಲಿ ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

ನಂತರ ಟೂ ಟರ್ನ್‌ ತೆಗೆದುಕೊಂಡು ಒನ್‌ವೇ ನಲ್ಲಿ ವಿರುದ್ಧವಾಗಿ ಸೆಕ್ಟೇರ್ 96 ಬಳಿ ಗೋಶಾಲಾ ಕಡೆಗೆ ತೆರಳುತ್ತಿದ್ದ ವೇಳೆ ಕಾರು ಪಂಕ್ಚರ್ ಆಗಿದೆ. ಆಗ ಅಪಹರಣಕಾರರು ಬೇರೆ ವಾಹನ ತಡೆಯಲು ಕಾರಿನಿಂದ ಇಳಿದಿದ್ದಾರೆ. ಇದೇ ಸಮಯಕ್ಕಾಗಿ ಕಾದಿದ್ದ ಸಚಿನ್ ಪಾಠಕ್ ಕಾರಿನಿಂದ ಇಳಿದು ಪರಾರಿ ಆಗಿದ್ದಾರೆ.

ಘಟನೆಯ ಬಗ್ಗೆ ಸಚಿನ್ ಪಾಠಕ್‌ ರಿಂದ ದೂರು ಪಡೆದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ನಾಲ್ಕು ಮಂದಿ ನೇರವಾಗಿ ಅಪಹರಣದಲ್ಲಿ ಭಾಗಿಯಾಗಿದ್ದರು. ಇನ್ನಿಬ್ಬರು ಅವರಿಗೆ ಸಹಾಯ ಮಾಡಿದ್ದರು. ಆರೋಪಿಗಳು ಕದ್ದ ಕಾರೊಂದರಲ್ಲಿ ಬಂದೂಕು ಮತ್ತಿತರೆ ಆಯುಧಗಳನ್ನು ಇಟ್ಟುಕೊಂಡು ಪ್ರಯಾಣ ಮಾಡಬೇಕಾದರೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Leave a Comment