ವೈಟ್ ಹೆಡ್ ಸಮಸ್ಯೆಗೆ ಮನೆಮದ್ದು

ಮಹಿಳೆಯರು ಮುಖದಲ್ಲಿ ಸಣ್ಣ ಕಲೆ ಉಂಟಾದರೂ ಅದಕ್ಕಾಗಿ ಅವರು ಮಾಡುವ ಆರೈಕೆ ಮಾತ್ರ ಅಷ್ಟಿಷ್ಟಲ್ಲ! ಅದರಲ್ಲೂ ಮೊಡವೆ, ಮುಖದಲ್ಲಿನ ಚುಕ್ಕೆಗಳು ಮೊದಲಾದವುಗಳು ಮುಖದಲ್ಲಿ ರಚನೆಯಾದಾಗಲಂತೂ ಹೆಣ್ಣು ಹೌಹಾರಿಬಿಡುತ್ತಾಳೆ. ಇಷ್ಟೊಂದು ಕಾಳಜಿಯನ್ನು ತ್ವಚೆಯ ಸೌಂದರ್ಯದ ವಿಷಯದಲ್ಲಿ ತೆಗೆದುಕೊಳ್ಳುವುದು ಅಗತ್ಯ.
ಮೂಗಿನ ಬದಿಯಲ್ಲಿ, ಕೆನ್ನೆ ಅಥವಾ ಗದ್ದದಲ್ಲಿ ಕಂಡುಬರುವ ವೈಟ್ ಹೆಡ್‌ಗಳನ್ನು ನಿವಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳುವುದು ಅಗತ್ಯ. ರಂಧ್ರಗಳು ಕೊಳೆ, ಮೃತಚರ್ಮ ಈ ವೈಟ್ ಹೆಡ್ಸ್ ಕಂಡುಬರುತ್ತದೆ. ಇವುಗಳು ಕಾಣಲು ಕಪ್ಪು ಬಣ್ಣದಲ್ಲಿದ್ದು ಇದರ ನಿವಾರಣೆ ತುಂಬಾ ಕಷ್ಟಕರವಾಗಿರುತ್ತದೆ. ಗಾಳಿಗೆ ಇದು ಹೆಚ್ಚು ಗೋಚರವಾಗುವುದರಿಂದ ಕಲೆಗಳು ಕಪ್ಪಾಗಿಯೇ ಇರುತ್ತದೆ. ಜಿಡ್ಡಿನ ತ್ವಚೆಯುಳ್ಳವರು ಬ್ಲಾಕ್‌ಹೆಡ್ ಹಾಗೂ ವೈಟ್‌ಹೆಡ್ ದಾಳಿಗೆ ಒಳಗಾಗುವುದು ಸಹಜವಾಗಿದೆ.
ಅಡುಗೆ ಸೋಡಾ ನೀರನ್ನು ಬೆರೆಸಿಕೊಂಡು ಸೋಡಾವನ್ನು ದಪ್ಪನೆಯ ಮಿಶ್ರಣವನ್ನಾಗಿ ತಯಾರಿಸಿ. ಇದನ್ನು ಕಲೆಗಳಿರುವ ಭಾಗಕ್ಕೆ ಹಚ್ಚಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿ ತದನಂತರ ಟೋನರ್ ಅನ್ನು ಮುಖಕ್ಕೆ ಬಳಸಿಕೊಳ್ಳಿ.  ಸ್ಟೀಮ್ ನಿಮ್ಮ ಮುಖವನ್ನು ಸ್ಟೀಮ್ಗೆ ಒಡ್ಡುವುದು ಕೂಡ ಈ ಸಮಸ್ಯೆಯನ್ನು ನಿವಾರಿಸಲಿದೆ. ಇದು ನಿಮ್ಮ ತ್ವಚೆಯನ್ನು ಶುಭ್ರವಾಗಿಸಿ ಮೃತಕೋಶಗಳನ್ನು ನಿವಾರಿಸಲಿದೆ. ವಾರಕ್ಕೊಮ್ಮೆ ಈ ಕ್ರಿಯೆಯನ್ನು ಅನುಸರಿಸಿ ಮತ್ತು ಫಲಿತಾಂಶವನ್ನು ನೀವೇ ಕಂಡುಕೊಳ್ಳಿ.
ಹುಡಿಮಾಡಿದ ಸಕ್ಕರೆಯಿಂದ ಸ್ಕ್ರಬ್ ತಯಾರಿಸಿಕೊಳ್ಳಿ ಇದಕ್ಕೆ ಲಿಂಬೆ ರಸವನ್ನು ಬೆರೆಸಿ ಮತ್ತು ಸಮಸ್ಯೆ ಇರುವ ತ್ವಚೆಯ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ. ಮೃತಕೋಶಗಳನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿ ಎಂದೆನಿಸಲಿದೆ. ಅಂತೆಯೇ ನಿರಂತರವಾಗಿ ಈ ಸ್ಕ್ರಬ್ ಅನ್ನು ಬಳಸುವುದು ವೈಟ್ ಹೆಡ್ ಅನ್ನು ಸಂಪೂರ್ಣವಾಗಿ ನಿವಾರಣೆ ಮಾಡಲಿದೆ.
ಹುಡಿ ಮಾಡಿದ ಓಟ್ಸ್ ಅನ್ನು ಮೊಸರಿನೊಂದಿಗೆ ಮಿಶ್ರ ಮಾಡಿ ಅದನ್ನು ನಿಮ್ಮ ಮೂಗು ಹಾಗೂ ಕೆನ್ನೆಗೆ ಹಚ್ಚಿಕೊಳ್ಳಿ. ಕಲೆಗಳನ್ನು ಮೊಸರು ನಿವಾರಿಸಿ ನಿಮ್ಮ ತ್ವಚೆಯನ್ನು ಶುಭ್ರವಾಗಿರಿಸಲಿದೆ.  ಆಪಲ್ ಸೀಡರ್ ವಿನೇಗರ್ ಇದು ಕೂಡ ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿದೆ. ಇದು ಟೋನರ್ನಂತೆ ಕಾರ್ಯನಿರ್ವಹಿಸಲಿದೆ. ಇದನ್ನು ನೀರಿನೊಂದಿಗೆ ಬೆರೆಸಿಕೊಳ್ಳಿ ಮತ್ತು ಮೂಗಿಗೆ ಹಚ್ಚಿ. ೧೦ ನಿಮಿಷ ಹಾಗೆಯೇ ಬಿಡಿ. ನಂತರ ಅದನ್ನು ತೊಳೆದುಕೊಳ್ಳಿ. ಇದನ್ನು ನಿಯಮಿತವಾಗಿ ಬಳಸುವುದು ವೈಟ್‌ಹೆಡ್ ಅನ್ನು ನಿವಾರಿಸಲಿದೆ.
ಕಡಲೆಹಿಟ್ಟನ್ನು ಹಾಲಿನೊಂದಿಗೆ ಮಿಶ್ರ ಮಾಡಿಕೊಳ್ಳಿ ಮತ್ತು ಮುಖಕ್ಕೆ ಸ್ಕ್ರಬ್‌ನಂತೆ ಇದನ್ನು ಬಳಸಿಕೊಳ್ಳಿ. ಇದು ಸಂಪೂರ್ಣ ಮುಖದಿಂದ ಮೃತಕೋಶಗಳನ್ನು ನಿವಾರಿಸಲಿದ್ದು ರಂಧ್ರಗಳನ್ನು ಮುಕ್ತವಾಗಿಸಲಿದೆ. ಇದರಿಂದ ವೈಟ್ಹೆಡ್ಸ್ ಉಂಟಾಗಲಾರದು.

Leave a Comment