ವೇಲ್‌ನಿಂದ ಬಿಗಿದು ಮಹಿಳೆ ಕೊಲೆ

ತುಮಕೂರು, ಸೆ. ೧೦- ಕೊರಳಿಗೆ ವೇಲ್‌ನಿಂದ ಬಿಗಿದು ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಗರದ ಆರ್.ಟಿ. ನಗರದಲ್ಲಿ ನಡೆದಿದೆ.

ಇಲ್ಲಿನ ಆರ್.ಟಿ. ನಗರದ ಇಸ್ಮಾಯಿಲ್ ಅವರ ಪತ್ನಿ ಫರ್ವೀನ್ ತಾಜ್ (40) ಎಂಬುವರೇ ಕೊಲೆಯಾಗಿರುವ ದುರ್ದೈವಿ. ಇವರು ಗುಬ್ಬಿ ತಾಲ್ಲೂಕು ಉಂಗ್ರಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಯಾರೋ ದುಷ್ಕರ್ಮಿಗಳು ಬಂದು ಈಕೆಯನ್ನು ವೇಲ್‌ನಿಂದ ಕೊರಳಿಗೆ ಸುತ್ತಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ಖಚಿತವಾದ ಮಾಹಿತಿ ತಿಳಿದು ಬಂದಿಲ್ಲ.

ಈ ಸಂಬಂಧ ಹೊಸ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಎನ್‌ಇಪಿಎಸ್ ಠಾಣೆಯ ಪಿಎಸ್ಐ ರಾಘವೇಂದ್ರ, ಕ್ಯಾತ್ಸಂದ್ರ ಸಿಪಿಐ ರಾಮಕೃಷ್ಣಯ್ಯ, ತಿಲಕ್‌ಪಾರ್ಕ್ ಸಿಪಿಐ ರಾಧಾಕೃಷ್ಣ, ಡಿವೈಎಸ್ಪಿ ನಾಗರಾಜು, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದರು.

Leave a Comment