ವೇದಿಕೆ ಪ್ರತಾಪಗೌಡ : ಶಿಷ್ಟಾಚಾರ ಉಲ್ಲಂಘನೆ

ರಾಯಚೂರು.ಏ.05- ಕೊರೊನಾ ಸೇರಿದಂತೆ ಇನ್ನಿತರ ಪ್ರಗತಿ ಪರಿಶೀಲನೆಯಲ್ಲಿ ಸಂಸದರು, ಶಾಸಕರು ಮಾತ್ರ ವೇದಿಕೆ ಹಂಚುಕೊಳ್ಳುವ ಶಿಷ್ಟಾಚಾರ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಉಲ್ಲಂಘಿಸಿದ ಘಟನೆ ಇಂದು ನಡೆಯಿತು.
ವೇದಿಕೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ದುರಂತವೆಂದರೇ, ಈ ವೇದಿಕೆ ಮೇಲೆ ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಆಸೀನರಾಗಿರುವುದು ಅನೇಕರು ಅಚ್ಚರಿಗೊಳ್ಳುವಂತೆ ಮಾಡಿತು. ವೇದಿಕೆ ಮೇಲೆ ಕೂಡುವ ಅವಕಾಶವಿದ್ದರೂ, ಶಿವನಗೌಡ ನಾಯಕ ಅವರು ಆರಂಭದಲ್ಲಿ ವೇದಿಕೆ ಹತ್ತಲಿಲ್ಲ. ನಂತರ ಅವರನ್ನು ವೇದಿಕೆ ಮೇಲೆ ಆಗಮಿಸುವಂತೆ ಕೋರಲಾಯಿತು.
ಆದರೆ, ಯಾವುದೇ ಶಾಸಕ ಸ್ಥಾನದ ಅಧಿಕಾರವಿಲ್ಲದಿದ್ದರೂ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನೆರವಾದರೂ ಎನ್ನುವ ಏಕೈಕ ಕಾರಣಕ್ಕೆ ಜಿಲ್ಲಾಡಳಿತ ಶಿಷ್ಟಾಚಾರ ಉಲ್ಲಂಘಿಸಿ, ಪ್ರತಾಪಗೌಡ ಪಾಟೀಲ್ ಅವರಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿರುವುದು ಮಾತ್ರವಲ್ಲದೇ, ಕೊರೊನಾ ಬಗ್ಗೆ ಚರ್ಚಿಸುವುದಕ್ಕೂ ಅವಕಾಶ ನೀಡಲಾಯಿತು. ಇದು ಕೆಲ ಬಿಜೆಪಿ ಶಾಸಕರು ಸೇರಿದಂತೆ ಇತರರಿಗೆ ಬೇಸರ ಮೂಡಿಸಿತ್ತಾದರೂ, ಯಾರು ಸಹ ಇದನ್ನು ಪ್ರಶ್ನಿಸದಿರುವುದು ಇಂದಿನ ಸಭೆಯ ಮತ್ತೊಂದು ವಿಶೇಷವಾಗಿತ್ತು.

Leave a Comment