ವೇದಾವತಿ ನಗರದಲ್ಲಿ ಶೌಚಾಲಯ : ಪೌರಾಯುಕ್ತರ ಭರವಸೆ

ಹಿರಿಯೂರು.ಜ.11: ಇಲ್ಲಿನ ವೇದಾವತಿ ನಗರದಲ್ಲಿ ಪ್ರತೀ ಬುಧವಾರ ನಡೆಯುವ ಸಂತೆಗೆ ಬರುವ ವ್ಯಾಪಾರಸ್ಥರು ಮಹಿಳೆಯರಿಗೆ ಶೌಚಾಲಯ ಇಲ್ಲದೇ ತೊಂದರೆ ಯಾಗುತ್ತಿರುವ ವಿಚಾರಕ್ಕೆ ಪೌರಾಯುಕ್ತರಾದ ಹೆಚ್. ಮಹಾಂತೇಶ್ ರವರು ಸ್ಪಂದಿಸಿದ್ದು ಶೌಚಾಲಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ವೇದಾವತಿ ನಗರದ ಸಂತೆ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ 14ನೇ ಹಣಕಾಸು ಯೋಜನೆ 2018-19ರಲ್ಲಿ ಹತ್ತು ಲಕ್ಷದ ಅನುದಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಟೆಂಡರ್ ಮೂಲಕ ಶೌಚಾಲಯ ನಿರ್ಮಿಸುವ ಯೋಜನೆ ಇದೆ ಎಂದು ತಿಳಿಸಿದ್ದು ಆದಷ್ಟು ಬೇಗನೆ ಶೌಚಾಲಯ ನಿರ್ಮಾಣ ಕಾರ್ಯ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗೂ ಇಲ್ಲಿನ ಸಮಸ್ಯೆಗೆ ತಾತ್ಕಾಲಿಕವಾಗಿ ಮೊಬೈಲ್ ಟಾಯ್ಲೇಟ್ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿರುತ್ತಾರೆ.

Leave a Comment