ವೇದಾವತಿ ನಗರದಲ್ಲಿ ಶೌಚಾಲಯಕ್ಕೆ ಮನವಿ

ಹಿರಿಯೂರು.ಜ.11: ಇಲ್ಲಿನ ವೇದಾವತಿ ನಗರದಲ್ಲಿ ಪ್ರತೀ ಬುಧವಾರ ನಡೆಯುವ ಸಂತೆಗೆ ಬರುವ ವ್ಯಾಪಾರಿಗಳಿಗೆ ಮಹಿಳೆಯರಿಗೆ ಶೌಚಾಲಯವಿಲ್ಲದೇ ತೀರಾ ತೊಂದರೆ ಉಂಟಾಗಿದೆ ಎಂದು ಸಂತೆ ವ್ಯಾಪಾರಿಗಳು ಹಾಗೂ ಅನೇಕ ಮಹಿಳೆಯರು ಪತ್ರಿಕೆಗೆ ತಿಳಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಸಂತೆ ವ್ಯಾಪಾರಿ ಖೈರೂನ್ ಬಿ ಯವರು ವೇದಾವತಿ ನಗರದಲ್ಲಿ ಸಂತೆ ಪ್ರಾರಂಭವಾಗಿ ಅನೇಕ ವರ್ಷಗಳೇ ಆಗಿದೆ ಆದರೆ ಆಗಿನಿಂದಲೂ ಇಲ್ಲಿ ಶೌಚಾಲಯವಿಲ್ಲದೇ ಸಂತೆ ವ್ಯಾಪಾರಕ್ಕೆ ಬರುವ ನಮಗೆ ತುಂಬಾ ತೊಂದರೆಯಾಗುತ್ತಿದೆ ಮನೆಗಳ ಸಂದಿಗಳಲ್ಲಿ ಶೌಚಕ್ಕೆ ಕುಳಿತುಕೊಳ್ಳುವ ಅನಿವಾರ್ಯತೆ ಇದ್ದು ಮನೆಗಳ ಮಾಲೀಕರು ಗಂಡಸರಿಂದ ಬೈಯ್ಯಿಸಿಕೊಳ್ಳುವುದು ತೀರಾ ನಾಚಿಕೆಗೇಡಿನ ವಿಚಾರವಾಗಿದೆ ಎಂದರು. ನಾವೂ ಮತದಾರರೇ ಜನಪ್ರತಿನಿಧಿಗಳು ಅಧಿಕಾರಿ ವರ್ಗದವರು ಇತ್ತ ಗಮನ ಹರಿಸಿ ತುರ್ತಾಗಿ ಶೌಚಾಲಯ ನಿರ್ಮಿಸಿಕೊಡಿ ಎಂದರು. ತರಕಾರಿ ವ್ಯಾಪಾರಿ ರಾಮಸ್ವಾಮಿ ಮಾತನಾಡಿ ಅಧಿಕಾರಿ ವರ್ಗದವರು ನಗರಸಭೆ ಅಧ್ಯಕ್ಷರು ಶಾಸಕರು ಇತ್ತ ಗಮನ ಹರಿಸಿ ಇಲ್ಲಿ ಆದಷ್ಟು ಬೇಗನೆ ಶೌಚಾಲಯ ನಿರ್ಮಿಸಿಕೊಟ್ಟು ಸಹಕರಿಸಬೇಕೆಂದು ತಿಳಿಸಿದ್ದು ಖೈರೂನ್‍ಬಿ, ಜಯಲಕ್ಷ್ಮಿ, ಕಮಲಮ್ಮ, ಲಕ್ಷ್ಮೀದೇವಿ, ಜ್ಯೋತಿಲಕ್ಷ್ಮಿ, ಅಕ್ಷತ, ಈರಮ್ಮ, ರತ್ನಮ್ಮ, ಮಂಜಮ್ಮ, ಜಯ್ಯಮ್ಮ, ಸುಮಿತ್ರ, ಜಯಶ್ರೀ ಇನ್ನೂ ಮುಂತಾದ ಮಹಿಳೆಯರು ಶೌಚಾಲಯ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.

Leave a Comment