ವೇತನ ಪರಿಷ್ಕರಣೆ ಘೋಷಣೆ- ಸಂಭ್ರಮಾಚರಣೆ

ರಾಯಚೂರು.ಮಾ.13- ಜೆಸ್ಕಾಂ ನೌಕರರ ವೇತನ ಪರಿಷ್ಕರಣೆ ಅಧಿಕೃತ ಘೋಷಣೆ ಹಿನ್ನೆಲೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಘ ವತಿಯಿಂದ ಸಂಭ್ರಮಾಚರಿಸಲಾಯಿತು.
ಜೆಸ್ಕಾಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಈ ಹಿಂದೆ 7,350 ರೂ. ಮಾಸಿಕ ವೇತನ ನೀಡಲಾಗುತ್ತಿತ್ತು. ವೇತನ ಪರಿಷ್ಕರಣೆ ಅಧಿಕೃತ ಬಳಿಕ ನೌಕರರ ವೇತನವನ್ನು 16,370 ರೂ.ಗೆ ಹೆಚ್ಚಳ ಮಾಡಿರುವ ನಿರ್ಧಾರವನ್ನು ಸ್ವಾಗತಿಸಿ
ಸ್ಥಳೀಯ ಜೆಸ್ಕಾಂ ಕಾರ್ಯಾಲಯ ಆವರಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಘ ನೌಕರರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.
ನೌಕರರ ಸಂಘದ ಸಂಚಾಲಕರಾದ ಜೆ.ಎಲ್. ಗೋಪಿ, ಅಬ್ದುಲ್ ಸಾಹೇಬ್, ಹುಸೇನಪ್ಪ, ಹೇಮರೆಡ್ಡಿ, ಅಯ್ಯಣ್ಣ, ಶ್ರೀನಿವಾಸ ದೇವನಪಲ್ಲಿ ಇನ್ನಿತರರು ಸಂಭ್ರಮಾಚರಣೆಯಲ್ಲಿ ಉಪಸ್ಥಿತರಿದ್ದರು.

Leave a Comment