ವೆಬ್ ಸೀರೀಸ್‌ಗೆ ನಿವೇದಿತಾ ವಿದೇಶದಲ್ಲಿ ಚಿತ್ರೀಕರಣ

ಹಾಲಿವುಡ್‌ನಲ್ಲಿದ್ದ ವೆಬ್ ಸೀರೀಸ್ ಇದೀಗ ಭಾರತಕ್ಕೂ ನಿಧಾನವಾಗಿ ಕಾಲಿರಿಸತೊಡಗಿದೆ. ಅಲ್ಲೊಂದು ಇಲ್ಲೊಂದು ನಿರ್ಮಾಣವಾಗುತ್ತಿವೆ. ಇದೀಗ ದಕ್ಷಿಣ ಭಾರತದ ಅತಿದೊಡ್ಡ ವೆಬ್ ಸೀರೀಸ್ ನಿರ್ಮಾಣವಾಗುತ್ತಿದೆ.ಅದಕ್ಕೆ ನಟ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಕೈ ಜೋಡಿಸಿದ್ದಾರೆ.
ನಿವೇದಿತಾ ಈಗಾಗಲೇ ಕಿರುತೆರೆಗೆ ಪ್ರವೇಶ ಮಾಡುವ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಂಸ್ಥೆ ಶ್ರೀಮುತ್ತು ಸಿನಿ ಸರ್ವಿಸ್ “ಹೇಟ್ ಯು ರೋಮಿಯೋ ’ವೆಬ್ ಸೀರೀಸ್ ನಿರ್ಮಿಸುತ್ತಿದ್ದಾರೆ. ಸಕ್ಕತ್ ಸ್ಟುಡಿಯೊ ಸಹನಿರ್ಮಾಣದ ಸಕ್ಕತ್ ಸ್ಟುಡಿಯೋ ಸಹ ನಿರ್ಮಾಣವಿದೆ.
ನಾಯಕನಾಗಿ ಆರವಿಂದ್ ಐಯ್ಯರ್ ಕಾಣಿಸಿಕೊಳ್ಳುತ್ತಿದಾರೆ.ನಾಯಕಿ ಇನ್ನೂ ಆಯ್ಕೆಯಾಗಿಲ್ಲ. ಲಂಡನ್‌ನಲ್ಲಿ ಇಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಅಲ್ಲೇ ಅಭಿನಯ ತರಬೇತಿ ಪಡೆದುಕೊಂಡಿದ್ದ ಅರವಿಂದ್ ಬೆಂಗಳೂರಿನಲ್ಲಿ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕಿರಿಕ್ ಪರ್ಟಿ ಸಿನಿಮಾದ ಮೂಲಕ ಗಮನ ಸೆಳೆದ್ದಿದ್ದು ಈಗ ” ಭೀಮಸೇನ ನಳಮಹರಾಜ” ಸಿನಿಮಾದಲ್ಲಿ ನಾಯಕ ನಟನಾಗಿ ಆಭಿನಯಿಸಿದ್ದಾರೆ.
” ವೆಬ್ ಸೀರೀಸ್ ” ಜನರನ್ನು ತಲುಪಲು ಪ್ರಭಾವಶಾಲಿಯಾಗಿದ್ದು ಹಿಂದಿಯಲ್ಲಿ ಮಾಧವನ್, ಸೈಫ್ ಅಲಿಖಾನ್, ತೆಲುಗಿನಲ್ಲಿ ಜಗಪತಿ ಬಾಬು ಮುಂತಾದವರು ಕಣೆಸಿಕೊಂಡಂತೆ , ಕನ್ನಡದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅರವಿಂದ್.
ಅಂದಹಾಗೆ ವೆಬ್ ಸೀರೀಸ್,೩೦ ನಿಮಿಷದ ೭ ಸಂಚಿಕೆಗಳಿರುತ್ತವೆ. ನಿವೇದಿತಾ ಅವರಿಗೆ ಮೊದಲ ವೆಬ್ ಸಿರೀಸ್ ಇದಾಗಿದೆ.ಇನ್ನೂ ಸಕ್ಕತ್ ಸ್ಟುಡಿಂi ” ಲೂಸ್ ಕನೆಕ್ಷನ್” ” ಡಾ ಪಾಲ್” ವೆಬ್ ಸೀರಿಸ್ ನಂತರದ ಮೂರನೇ ವೆಬ್ ಸೀರೀಸ್ ಇದಾಗಿರುತ್ತದೆ. “ಲೂಸ್ ಕನೆಕ್ಷನ್” ನಿರ್ದೇಶಕ ಹಸೀನ್ ಖಾನ್ ಹಾಗು ಇಶಾಮ್ ಖಾನ್ “ಹೇಟ್ ಯು ರೋಮಿಯೋ ” ನಿರ್ದೇಶಕರಾಗಿರುತ್ತಾರೆ.
ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಚಿತ್ರೀಕರಣವಾಗುತ್ತಿರುವ ವೆಬ್ ಸೀರೀಸ್ ಎನ್ನುವ ಹೆಗ್ಗಳಿಕೆ ’ ಹೇಟ್ ಯೂ ರೋಮಿಯೋ’ಗೆ ಸೇರಿದೆ.

ಬಾಕ್ಸ್

ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಚೊಚ್ಚಲ ಬಾರಿಗೆ ವೆಬ್ ಸೀರೀಸ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಕ್ಕತ್ ಸ್ಟುಡಿಯೋ ಜೊತೆ ಸೇರಿ ’ಹೇಟ್ ಯೂ ರೋಮಿಯೋ’ ವಿದೇಶದಲ್ಲಿ ಚಿತ್ರೀಕರಿಸಲು ಮುಂದಾಗಿದ್ದಾರೆ.

Leave a Comment