ವೆಬ್ ಸಿರೀಸ್‌ನಲ್ಲಿ ಪ್ರಿಯಾಮಣಿ ಸದ್ದು

‘ದಕ್ಷಿಣ ಭಾರತದಲ್ಲೂ ಇಂತಹ ಪ್ರಯತ್ನ ನಡೆಯಬೇಕಿದೆ’-  ಪ್ರಿಯಾಮಣಿ

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್‌ನಲ್ಲಿ ಬಹುಭಾಷಾ ನಟಿ ಪ್ರಿಯಾಮಣಿ ಸುಚಿತ್ರ ಪಾತ್ರಧಾರಿಯಾಗಿ ಮತ್ತೆ ಸದ್ದು ಮಾಡಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಹಾಗೂ ಪದ್ಮ ಶ್ರೀ ಪ್ರಶಸ್ತಿ ವಿಜೇತ ಮನೋಜ್ ಬಾಜ್ಪಯಿ ಅವರ ಪತ್ನಿಯಾಗಿ ಹಾಗೂ ತಮಿಳುನಾಡು ಮೂಲದ ಗೃಹಿಣಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಮಣಿ ಮಾದ್ಯಮಾ ವರ್ಗದ ಜೀವನದಲ್ಲಿ ಹಲವು ರಹಸ್ಯಮಯ ಹಾಗೂ ಎದುರಾಗುವ ತೊಡಕುಗಳ ಮಧ್ಯೆ ಹೇಗೆ ಕುಟುಂಬ ನಿಭಾಯಿಸಬಹುದು ಎಂಬುದನ್ನು ಜನರು ಮುಂದಿಡಲು ಹೊರಟ್ಟಿದ್ದಾರೆ. ಚಿತ್ರರಂಗ, ಕಿರುತೆರೆಯಲ್ಲಿ ಮಿಂಚಿದ್ದ ಪ್ರಿಯಾಮಣಿ ಅವರು ಈ ವೆಬ್ ಸಿರೀಸ್ ಬಗ್ಗೆ ಏನು ಹೇಳುತ್ತಾರೆ ನೋಡಿ.
* ದಿ ಫ್ಯಾಮಿಲಿ ಮ್ಯಾನ್ ಸರಣಿ ಏನು ಹೇಳುತ್ತದೆ?
ದಿ ಫ್ಯಾಮಿಲಿ ಮ್ಯಾನ್, ತನ್ನ ಕುಟುಂಬದ ಜವಾಬ್ದಾರಿಗಳು ಮತ್ತು ರಾಷ್ಟ್ರೀಯ ತನಿಖಾ ದಳದ ಏಜೆಂಟ್ ಆಗಿ ಅತ್ಯಂತ ರಹಸ್ಯಮಯ ವಿಶೇಷ ಘಟಕಕ್ಕಾಗಿ ಕಾರ್ಯನಿರ್ವಹಿಸುವ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುವ ಬಗ್ಗೆ ಹೇಳುತ್ತ ಹೋಗುತ್ತದೆ. ನಟ ಮನೋಜ್ ಬಾಜ್ಪಯಿ ಅವರು ಮನೆಯನ್ನು ಹಾಗೂ ಎನ್‌ಐಎ ಏಜೆಂಟ್ ಆಗಿ ಬೆದರಿಕೆಗಳ ಮಧ್ಯೆ ಹೇಗೆ ಕುಟುಂಬವನ್ನು ಸರಿಸಮಾನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಇದರ ಮಧ್ಯೆ ಜೀವನದಲ್ಲಿ ಬಂದು ಹೋಗುವ ಸನ್ನಿವೇಶಗಳು ಅತ್ಯಂತ ಕುತುಹಲ ಹಾಗೂ ರಹಸ್ಯಮಯವಾಗಿದೆ.

* ಚಿತ್ರರಂಗಕ್ಕೂ ವೆಬ್ ಸಿರೀಸ್‌ಕ್ಕೂ ವ್ಯತ್ಯಾಸ?
ಚಿತ್ರರಂಗದಲ್ಲಿ ಇಂತಹ ಅನೇಕ ಕಥೆಗಳು ಬಂದು ಹೋಗಿವೆ, ಆದರೆ ಸಂಪೂರ್ಣವಾಗಿ ಮಾಹಿತಿ ನೀಡಲು ಸಾಧ್ಯವಾಗಿರುವುದಿಲ್ಲ. ಚಿತ್ರೀಕರಣಕ್ಕಾಗಿ, ಡಬ್ಬಿಂಗ್‌ಗಾಗಿ ಸಾಕಷ್ಟು ಸಮಯವನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ವೆಬ್ ಸಿರೀಸ್‌ನಲ್ಲಿ ಸಂಪೂರ್ಣ ಕಥೆಯನ್ನು ಡಿಟೇಲ್ ಆಗಿ ತೋರಿಸುವುದೇ ವಿಶೇಷ. ಇನ್ನು ಒಂದೇ ಬಾರಿ ಚಿತ್ರೀಕರಣ ಹಾಗೂ ಡಬ್ಬಿಂಗ್‌ಗಳು ನಡೆಯಲಿದೆ. ಹಾಗೂ ಚಿತ್ರೀಕರಣದ ವೇಳೆ ಇಡೀ ವಾತಾವರಣವೇ ಸೈಲೆಂಟ್ ಆಗಿಬಿಡುತ್ತದೆ, ಇನ್ನು ತೀರಾ ಅನಿವಾರ್ಯ ಎನಿಸಿದಾಗ ಮಾತ್ರ ಡಬ್ಬಿಂಗ್ ಮಾಡಲಾಗುವುದು. ಸುಮಾರು ೧೦ ಎಪಿಸೋಡ್‌ನಲ್ಲಿ ಸರಣಿಯನ್ನು ಸೆರೆಹಿಡಿಯಲಾಗಿದೆ. ಬಿಡುಗಡೆಗೂ ಮುಂಚೆ ಇಡೀ ತಂಡ ತುಂಬಾನೆ ರೋಮಾಂಚನಗೊಂಡಿತ್ತು.
*ನಟ ಮನೋಜ್ ಬಾಜ್ಪಯಿ ಅವರ ಜೊತೆ ನಟಿಸಿದ ಅನುಭವ ಹೇಗಿತ್ತು?
ಪಾತ್ರಕ್ಕಾಗಿ ಅವರು ಮಾಡಿಕೊಳ್ಳವ ತಯಾರಿ ನಿಜಕ್ಕೂ ಅದ್ಬುತ, ಇನ್ನು ಅವರ ಜೊತೆ ಪರದೆ ಹಂಚಿಕೊಳ್ಳಲು ಅವಕಾಶ ಸಿಕ್ಕರೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ತಾನು ಪ್ರಶಸ್ತಿ ವಿಜೇತ ಎಂದು ಬಿಗುವುದಿಲ್ಲ, ಬಹಳ ಸ್ನೇಹಮಯಯಾಗಿ, ತಮಾಷೆ ಮಾಡುತ್ತ ಸೆಟ್‌ನಲ್ಲಿ ಇರುತ್ತಾರೆ, ನಟನೆ ವಿಚಾರಕ್ಕೆ ಬಂದರೆ ಕ್ಯಾಮರ ಮುಂದೆ ನಿಜವಾದ ಪಾತ್ರಧಾರಿಯಾಗಿ ಬಿಡುತ್ತಾರೆ. ಅದು ನಮ್ಮೆನ್ನೆಲ್ಲಾ ಗಂಭೀರ ನಟನೆಗೂ ಸಹಕಾರಿಯಾಗುತ್ತದೆ. ಅವರ ನಟನೆ ನೋಡುತ್ತಲೇ ನಾವು ಅಲರ್ಟ್ ಆಗುತ್ತೇವೆ.

*ರಾಜ್ ಹಾಗೂ ಡಿಕೆ ಜೋಡಿ ಬಗ್ಗೆ ಏನು ಹೇಳುತ್ತೀರಾ?
ಹೌದು ದಿ ಫ್ಯಾಮಿಲಿ ಮ್ಯಾನ್ ಶೋ ಸೃಷ್ಠಿಕೃತರಾದ ರಾಜ್ ನಿಡಿಮೋರು ಹಾಗೂ ಕೃಷ್ಣ ಡಿಕೆ ಅವರಲ್ಲಿರುವ ಒಗ್ಗಟ್ಟು ಮೆಚ್ಚುವಂತಹದು. ಇಂತಹ ಒಳ್ಳೆಯ ನಿರ್ದೇಶಕರ ಬಳಿ ಕೆಲಸ ಮಾಡಲು ನಿಜಕ್ಕೂ ಪುಣ್ಯ ಮಾಡಿರಬೇಕು. ಇವರ ಆಲೋಚನೆಗಳು ಒಂದೇ ರೀತಿ ಇರುತ್ತದೆ, ನಾನು ಮೊದಲ ಬಾರಿಗೆ ಇಂತಹ ನಿರ್ದೇಶಕರನ್ನು ನೋಡಿದ್ದು, ಒಬ್ಬರು ಕಥೆ ಬಗ್ಗೆ ಹೇಳಿದ್ದರೇ, ಇನ್ನೊಬ್ಬರು ನಟನೆ ಬಗ್ಗೆ ಹೇಳಿಕೊಟ್ಟು ಅಭಿನಯ ತೆಗೆಸುತ್ತಾರೆ. ಒಟ್ಟಾರೆ ರಾಜ್-ಡಿಕೆ ಜೊತೆ ಕೆಲಸ ಮಾಡಿದ ಅನುಭವು ನಿಜಕ್ಕೂ ಹೊಸದು ಹಾಗೂ ಖುಷಿ ತಂದುಕೊಟ್ಟಿದೆ.

*ಡಿಜಿಟಲ್ ವಾಹಿನಿಗಳ ಬಗ್ಗೆ ನಿಮ್ಮ ಅನಿಸಿಕೆ?
ಇತ್ತೀಚೆಗೆ ಡಿಜಿಟಲ್ ವಾಹಿನಿಗಳು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ, ಅಲ್ಲದೇ ಉತ್ತಮ ಭವಿಷ್ಯವನ್ನು ಇದರಲ್ಲಿ ಕಂಡುಕೊಳ್ಳಬಹುದು, ಸಣ್ಣ ಸಣ್ಣ ಕಲಾವಿದರಿಂದ ದೊಡ್ಡ ದೊಡ್ಡ ಕಲಾವಿದರು ಇದೀಗ ಡಿಜಿಟಲ್ ಮಾಧ್ಯಮಕ್ಕೆ ಮಾರು ಹೋಗಿದ್ದಾರೆ. ಜನರಿಗೆ ಬಹುಬೇಗ ಇದು ತಲುಪುತ್ತದೆ. ಹಾಗೂ ದಕ್ಷಿಣ ಭಾರತದಲ್ಲೂ ಇಂತಹ ಪ್ರಯತ್ನಕ್ಕೆ ಕೈಹಾಕುವುದು ಉತ್ತಮ ಎಂಬುದು ನನ್ನ ಅನಿಸಿಕೆ.

*ಅಮೆಜಾನ್ ಬಗ್ಗೆ?
ಇಂತಹ ಅವಕಾಶ್ ಮಾಡಿಕೊಟ್ಟ ಅಮೆಜಾನ್‌ಗೆ ಧನ್ಯವಾದಗಳು, ಎಲ್ಲಿ, ಯಾವಾಗಬೇಕದಾರೂ ವೆಬ್ ಸಿರೀಸ್ ನೋಡಿ ಆನಂದಿಸಬಹುದು.

www.PrimeVideo.comಗೆ ಭೇಟಿ ನೀಡಿ ಅಥವಾ ಇಂದೇ ಅಮೆಜಾನ್ ಪ್ರೈಮ್ ವೀಡಿಯೋ ಆಪ್ ಡೌನ್‌ಲೋಡ್ ಮಾಡಿಕೊಂಡು ವಾರ್ಷಿಕ ರೂ. ೯೯೯/-ದಲ್ಲಿ ಅಥವಾ ಮಾಸಿಕ ರೂ. ೧೨೯/-ರ ಪ್ರೈಮ್ ಸದಸ್ಯತ್ವಕ್ಕಾಗಿ ಸೈನ್ ಅಪ್ ಮಾಡಿ ಸರಣಿಯನ್ನು ವೀಕ್ಷಿಸಿ ಅಭಿಪ್ರಾಯ ಹಂಚಿಕೊಳ್ಳಿ. ಹಾಗೂ ಅಮೆಜಾನ್ ಇತರೆ ಶೋಗಳನ್ನು ಬೆಂಬಲಿಸಿ.

Leave a Comment