ವೆಬ್ ಸಿರೀಸ್‌ಗೆ ನಟಿ ಐಂದ್ರಿತಾ

ಬೆಂಗಳೂರು, ಫೆ ೧೧- ಕನ್ನಡದ ನಟಿ ಐಂದ್ರಿತಾ ರೇ ಇದೀಗ ವೆಬ್‌ಸಿರೀಸ್‌ಗೆ ಲಗ್ಗೆ ಇಡುವ ಮೂಲಕ ಗಮನ ಸೆಳೆದಿದ್ದಾರೆ.

ಚಂದನವನದ ಅನೇಕ ಚಿತ್ರಗಳಲ್ಲಿ ತನ್ನ ಮುದ್ದಾದ ನಟನೆಯಿಂದಲೇ ಮನಸೆಳೆದಿದ್ದ ಬೆಂಗಾಲಿ ಮೂಲದ ಚೆಲುವೆ ಐಂದ್ರಿತಾ ರೇ ಇತ್ತೀಚೆಗೆ ಅಂದರೆ ೨೦೧೮ರಲ್ಲಿ ನಟ ದಿಗಂತ್ ಜೊತೆ ಸಪ್ತಪದಿ ತುಳಿದಿದ್ದರು, ಆ ಬಳಿಕ ಹೆಚ್ಚಾಗಿ ಚಿತ್ರಗಳಲ್ಲಿ ಕಾಣಿಸಿಕೊಂಡಿರಲ್ಲಿಲ್ಲ.

an
ಹೀಗಿರುವಾಗಲೇ, ನಟಿ ಐಂದ್ರಿತಾ ರೇ ವೆಬ್ ಸಿರೀಸ್‌ಗೆ ಪದಾರ್ಪಣೆ ಮಾಡುವ ಮೂಲಕ ತನ್ನ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಮದುವೆ ಆದ ಮೇಲೆ ಕನ್ನಡ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ಐಂದ್ರಿತಾ ರೇ ಇದೀಗ ಹಿಂದಿಯ ವೆಬ್ ಸೀರೀಸ್ ವೊಂದರಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದಿ ಕ್ಯಾಸಿನೋ – ಮೈ ಗೇಮ್, ಮೈ ರೂಲ್ಸ್’ ಎಂಬ ಹಿಂದಿ ವೆಬ್ ಸೀರೀಸ್ ನಲ್ಲಿ ನಟಿ ಐಂದ್ರಿತಾ ರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾರ್ದಿಕ್ ಗಜ್ಜರ್ ನಿರ್ಮಾಣದ ಮತ್ತು ನಿರ್ದೇಶನದ ವೆಬ್ ಸೀರೀಸ್ ಇದಾಗಿದ್ದು, ಏ ೧೦ ರಂದು ಬಿಡುಗಡೆ ಆಗಲಿದೆ. ಈ ಸೀರೀಸ್ ನಲ್ಲಿ ಹಿಂದಿ ಕಿರುತೆರೆಯ ಕರಣ್ವೀರ್ ಬೋರಾ, ಸುಧಾನ್ಷು ಪಾಂಡೇ, ಮಂದನಾ ಕರೀಮಿ, ರೋಮಿತ್ ರಾಜ್, ದಿಗಾಂಗನಾ ಸೂರ್ಯವಂಶಿ ಮತ್ತು ಮುಕುಲ್ ದೇವ್ ಅಭಿನಯಿಸುತ್ತಿದ್ದಾರೆ. ಇವರೆಲ್ಲರ ಜೊತೆಗೆ ಐಂದ್ರಿತಾ ರೇ ಕೂಡ ಇದ್ದಾರೆ.

an2

ಜೀ೫ನಲ್ಲಿ ಏ ೧೦ರಿಂದ ೧೦ ಸಂಚಿಕೆಗಳ ಸರಣಿ ಪ್ರಸಾರವಾಗಲಿದ್ದು, ಈಗಾಗಲೇ ಸಿರೀಸ್‌ನ ಚಿತ್ರೀಕರಣ ಭರದಿಂದ ಸಾಗಿದೆ.  ಕನ್ನಡ ಪ್ರಿಯಾಮಣಿ, ಹಾಗೂ ಟಾಲಿವುಡ್‌ನ ಸಮಂತಾ ಅಕ್ಕಿನೆಕ್ಕಿ, ರಾಧಿಕಾ ಅಪ್ಟೆ ಸೇರಿದಂತೆ ಮತ್ತಿತರರು ನಟಿಯರ ಬಳಿಕ ನಟಿ ಐಂದ್ರಿತಾ ರೇ ಕೂಡ ವೆಬ್ ಸಿರೀಸ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

Leave a Comment