ವೆಂಟಿಲೀಟರ್ ಮೂಲಕ ನುಗ್ಗಿ ಕಳ್ಳತನ

ಹುಬ್ಬಳ್ಳಿ,ಜ.29- ಗೋಡೆ ಮೇಲೆ ಅಳವಡಿಸಿದ್ದ ವೆಂಟಿಲೀಟರ್ ಮೂಲಕ ಒಳ ನುಗ್ಗಿದ ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ಉಪನಗರ ಪೊಲೀಸ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊಸೂರು ನ್ಯೂಕಾಟನ್ ಮಾರ್ಕೆಟ್ ನಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕಛೇರಿ ಹಿಂದಿನ ಗೋಡೆಗೆ ಅಳವಡಿಸಿದ್ದ ವೆಂಟಿಲೀಟರ್ ಮೂಲಕ ಒಳನುಗ್ಗಿದ ಕಳ್ಳರು ಕಛೇರಿಯ ಸಂಗ್ರಹ ಕೊನೆಯಲ್ಲಿ 6000 ರೂ. ಬೆಲೆಬಾಳು ಗೋದ್ರೇಜ್ ಬೀಗ ಇರುವ ಬ್ಲಾಗ್ ಹಾಗೂ ಇತರ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಉಪನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment