ವೃಷಭ

ಈ ವರ್ಷಾರಂಭ 20.03.2017 ರಿಂದ 12.09.2017ರವರೆಗೆ 5ನೇ ಗುರು. ನಂತರ 6ನೇ ಗುರು ವರ್ಷಾಂತ್ಯ 17.03.2018ರವರೆಗೆ ಇರುವನು. ಆರಂಭದ ವರ್ಷ ನಿಮಗೆ ಎಣೆಯಿಲ್ಲದ ಭಾಗ್ಯ ಅಲಂಕರಿಸಲಿದೆ. ವ್ಯವಹಾರೋದ್ಯ ಅನಾಯಾಸವಾಗಿ ಅಭಿವೃದ್ಧಿ ಹೊಂದುವುದು. ಹಣದ ವ್ಯವಸ್ಥೆ ನಿರೀಕ್ಷೆ ಮೀರಿ ಬೆಳೆಯಲಿದೆ. ಆರೋಗ್ಯ ಆಹ್ಲಾದವುಂಟು ಮಾಡುವುದು. ಕುಟುಂಬ ನಿಯಂತ್ರಣದಲ್ಲಿದ್ದು, ದುಡಿಮೆಗೆ ನಾಂದಿಯಾಡಲಿದೆ. ನಿಮ್ಮ ಕನಸಿನ ಯೋಜನೆಗಳು ಸಾಕಾರಗೊಳ್ಳುತ್ತವೆ. ಮಡದಿ, ಮಕ್ಕಳು ಸುಖ – ಸಂತೋಷಗಳಿಂದ ಸಂಭ್ರಮಿಸುವರು. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಕಬ್ಬಿಗೆ ಜೇನಿಟ್ಟಂತೆ ಇರುವವು 12.09.2017 ನಂತರ ವರ್ಷಾಂತ್ಯದವರೆಗೆ 6ನೇ ಗುರು ಆರ್ಥಿಕ ಸಂಪನ್ಮೂಲಗಳಿಗೆ ಧಕ್ಕೆ ತರುವನು. ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಆಪತ್ತುಗಳನ್ನು ತಂದೊಡ್ಡುವನು. ನೌಕರಿಯಲ್ಲಿ ಬಡ್ತಿಗೆ ಕತ್ತರಿ ಬೀಳುವುದು. ಮಕ್ಕಳು ಸಾಧನೆಯಲ್ಲಿ ಹಿಂದೆ ಬೀಳುವರು. ಸರ್ಕಾರಿ ಕೆಲಸ ಕಾರ್ಯಗಳಿಗೆ ಓಡಾಟ ಅತಿಯಾಗಿ ನಿರಾಸೆ ಪಡಿಸುವುದು. ಸ್ಥಳಾಂತರ ಸಂಭವ. ಅಸಹಕಾರ ಕಾಣುವುದು. ಶತ್ರು ಕಾಟ ಬಿಸಿ ಮೂಡಿಸುವುದು. ವಸ್ತು ನಷ್ಟ ಸಂಭವ. ಅಪವಾದ ನಿಂದನೆಗಳು ಕೇಳಿಬರುವವು. 20.06.2017 ರಿಂದ 8ನೇ ಶನಿ 25.10.2017ರವರೆಗೆ ವಕ್ರಿಯಾಗಿ 7ನೆಯವನಿದ್ದು, ಮುಂದೆ ವರ್ಷಾಂತ್ಯದವರೆಗೆ 8ನೆಯವನಾಗಿರುತ್ತಾನೆ. ಈ ಅವಧಿಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಸಂಬಂಧವಿಲ್ಲದ ಸಮಸ್ಯೆಗಳು ಕಾಡುವವು. ಆಹಾರ, ವಿಹಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸಿರಿ. ವ್ಯಾಪಾರ, ವ್ಯವಸಾಯ, ಕೈಗಾರಿಕೆಗಳು, ಉತ್ಪನ್ನಗಳು, ಬೆಳೆಗಳು ಹರಿದು ಹಂಚಿ ಹೋಗುವವು. ಗೃಹ ನಿರ್ಮಾಣ ಅರ್ಧಕ್ಕೆ ನಿಲ್ಲುವುದು. ವಾಹನದಿಂದ ನಷ್ಟ ಕಾಣುವಿರಿ. ಮಹಿಳೆಗೆ ಅನಾರೋಗ್ಯ ಬಾಧೆ, ಮದುವೆಗೆ ವಿಘ್ನ. ನೌಕರಿಯಲ್ಲಿ ಕಿರಿಕಿರಿ, ತಪ್ಪಿನ ಅರಿವಾಗಿ ಸನ್ಮಾರ್ಗದಲ್ಲಿ ನಡೆಯುವಿರಿ.

ಆದಾಯ – 14, ವ್ಯಯ – 11.