ವೃಶ್ಚಿಕ

ಈ ವರ್ಷ ಯುಗಾದಿಯಿಂದ 12.9.2017ರ ವರೆಗೆ 11ನೇ ಗುರು ಬಲಾಢ್ಯನಿದ್ದಾನೆ. 17.3.2018ರ ವರೆಗೆ 12ನೇ ಗುರು ನಿರ್ಬಲನಾಗಿದ್ದಾನೆ. ಈ ವರ್ಷ ಪೂರ್ವಾರ್ಧದಲ್ಲಿ ಎಣೆ ಇಲ್ಲದೆ ಭಾಗ್ಯ ಕೊಡುವನು. ಕುಟುಂಬದ ಬದುಕು ಸುಖ ಮತ್ತು ಶಾಂತಿಯಿಂದ ಕೂಡಿರುತ್ತದೆ. ಆಧ್ಯಾತ್ಮಿಕ ಚಿಂತನೆಯಲ್ಲಿ ವಿಹರಿಸುವಿರಿ. ಉದ್ಯಮ ಬಲಪಡಿಸುವಿರಿ. ಆದಾಯವಂತೂ ಮೀರಿ ಬರಲಿದೆ. ಹೊಸ ಉದ್ಯಮಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸುವಿರಿ. ಕಾರ್ಯರೂಪದಲ್ಲಿ ಯಶಸ್ವಿಗಳಾಗಿ ಮೆರೆಯುವಿರಿ. ಮಡದಿ ಮಕ್ಕಳು ಆರೋಗ್ಯಪೂರ್ಣ ಸಾಧನೆಗೈಯ್ಯುವರು. ಹೂಡಿಕೆಗಳು ನಡೆಯುವವು. ದೈಹಿಕ ಮಾನಸಿಕ ಬಲಗಳು ಗಟ್ಟಿಗೊಳ್ಳುವವು. ಧಾರ್ಮಿಕ ಸಮಾರಂಭವೊಂದರಲ್ಲಿ ನಿಮಗೆ ಗೌರವ ರಕ್ಷೆ ಸಿಗುವುದು. ಉತ್ತರಾರ್ಧ ವರ್ಷದಲ್ಲಿ ಅನೇಕ ತಾಪತ್ರಯಗಳಿಗೆ ಒಳಗಾಗುತ್ತೀರಿ. ಗೃಹ ಕೈಗಾರಿಕೆಗಳು ಇಳಿಮುಖವಾಗುವವು. ನಿಮಗೆ ಗೊತ್ತಾಗದಂತೆ ಧನಹಾನಿಯಾಗಲಿದೆ. ಮಡದಿಯ ನೌಕರಿಯಲ್ಲಿ ಸ್ಥಾನ ಬದಲಿಯಾದೀತು. ಆಭರಣಗಳ ಖರೀದಿ ಮಾಡುವಳು. ಸರ್ಕಾರಿ ಕೆಲಸದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುವುದು. ಶನಿಯ 20.6.2017ರ ವರೆಗೆ 2ನೇಯವನು. 25.10.2017ರ ವರೆಗೆ ಜನ್ಮದಲ್ಲಿದ್ದು ಮುಂದೆ ಮಾರ್ಗಿಯಾಗುವುದರಿಂದ ಧೈರ್ಯ, ಸಾಹಸಗಳಿಂದ ಕಾರ್ಯ ನಿರ್ವಹಿಸುವಿರಿ. ರೈತರಿಗೆ ಭಾಗ್ಯವಿದೆ. ಖರ್ಚು ಹೆಚ್ಚು ಬಂದರೂ ಆದಾಯ ಮಾತ್ರ ಬರುತ್ತಲೇ ಇರುತ್ತದೆ. ವ್ಯಾಪಾರಿ, ಸಾಹಿತಿ, ಕಲಾವಿದ, ವಕೀಲ, ವೈದ್ಯರು ಸಂತೃಪ್ತಿ ಜೀವನ ನಡೆಸುವರು. ವರ್ಷಾಂತ್ಯದಲ್ಲಿ ಅಪಾಯದಿಂದ ಪಾರಾಗುವಿರಿ. ತೀರ್ಥಯಾತ್ರೆಯನ್ನೂ ಪೂರೈಸುವಿರಿ.

ಆದಾಯ 5, ವ್ಯಯ 5