ವೃದ್ಧ ದಂಪತಿಯ ಕೊಲೆ ಆರೋಪಿಗಳ ಬಂಧನ

=

ಹುಮನಾಬಾದ,ಜೂ.19- ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು ವೃದ್ಧ ದಂಪತಿಗಳ (ಜೋಡಿ) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಟ್ಟಣದಲ್ಲಿ ವಾಸವಾಗಿದ್ದ ಹೈದ್ರಾಬಾದ ಮೂಲದ ವೃದ್ಧ ದಂಪತಿಗಳಾದ ಪಿ.ನವರತ್ನ ರೆಡ್ಡಿ ಹಾಗೂ ಪಿ.ಸ್ನೇಹ ಲತಾರೆಡ್ಡಿ ಇವರನ್ನು ಟಾವಲ್‍ದಿಂದ ಕುತ್ತಿಗೆಗೆ ಬಿಗಿದು ರಾಡಿನಿಂದ ಹಲ್ಲೆ ಮಾಡಿ ಕೊಂದು ಶವವನ್ನು ವಿಕಾರಾಬಾದ ಹತ್ತಿರದ ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದ ಆರೋಪಿಗಳಿಬ್ಬರು ಜೈಲು ಸೇರಿದ್ದಾರೆ.

ಈ ವೃದ್ಧ ದಂಪತಿಗಳಲ್ಲಿ ಸಾಕಷ್ಟು ಚಿನ್ನಾಭರಣ ಮತ್ತು ಹಣ ಇದ್ದು, ಇದನ್ನು ಲಪಟಾಯಿಸಲು ಹೊಂಚು ಹಾಕಿದ ಆರೋಪಿ ಸತೀಶ ಧುಮ್ಮನಸೂರ ಈ ದಂಪತಿಯ ಕಾರ್ ಡ್ರೈವರನಾಗಿ ಸೇರಿಕೊಂಡಿದ್ದ.

ಇದೆ ಜೂನ್ 12ರಂದು ಈ ದಂಪತಿಗಳು ಇನೋವಾ ಕಾರನಲ್ಲಿ ಹೈದ್ರಾಬಾದಿಗೆ ಪ್ರಯಾಣಿಸದ ನಂತರ ವಾಪಸ್ ಬಂದಿರಲಿಲ್ಲ ಈ ಬಗ್ಗೆ ಹುಮನಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದಂಪತಿಗಳನ್ನು ಹೈದ್ರಾಬಾದದಿಂದ ವಾಪಸ ಜೂ.13ರಂದು ಕರೆದುಕೊಂಡು ಬರುವಾಗ ಸಿಂಧನಕೇರಾ ಕ್ರಾಸ್ ಹತ್ತಿರ ಬರುವಾಗ ದೂರವಾಣಿ ಕರೆ ಮಾಡಿ ತನ್ನ ಸ್ನೇಹಿತ ರಾಹುಲ್‍ನನ್ನು ಕರೆಸಿಕೊಂಡು ನಸುಕಿನಜಾವ 1ಗಂಟೆಯ ಸುಮಾರಿನಲ್ಲಿ ಕಬ್ಬಿಣದ ರಾಡಿನಿಂದ ಹಲ್ಲೆಮಾಡಿ, ಟಾವಲ್‍ದಿಂದ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿ ಅವರಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೊಚಿಕೊಂಡು ಶವ ವನ್ನು ವಿಕಾರಬಾದ ಹತ್ತಿರದ ಅನಂತಗಿರಿ ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದರು.

ಬೀದರ ಎಸ್ಪಿ ಮತ್ತು ಹೆಚ್ಚುವರಿ ಎಸ್ಪಿ, ಹುಮನಾಬಾದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ಜೆಎಸ್ ನ್ಯಾಮಗೌಡ, ಪಿಎಸ್‍ಐ ಸಂತೋಷ ಹಾಗು ಸಿಬ್ಬಂದಿಗಳ ತಂಡ ಕ್ಷಿಪ್ರ ಕಾರ್ಯಚರಣೆ ಕೈಗೊಂಡು ಆರೋಪಿಗಳಾದ ಧುಮ್ಮನಸೂರ ಗ್ರಾಮದ ಸತೀಶ್ ಅಲಿಯಾಸ್ ಸತೀಶ ಕುಮಾರ ಹಾಗೂ ರಾಹುಲ್ ಎಂಬುವರನ್ನು ಬಂಧಿಸಿ ಅವರಿಂದ 5 ಲಕ್ಷ ರೂ.ನಗದು, 28 ತೊಲೆ ಬಂಗಾರ, 4ಮೊಬೈಲ್, ಕೊಲೆಗೆ ಬಳಸಿದ ರಾಡ್, ಟಾವಲ್ ಮತ್ತು ಇನೋವಾ ಕಾರ ಜಪ್ತಿಮಾಡಿದ್ದಾರೆ. ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಪೊಲೀಸ ಅಧಿಕ್ಷಕರು ಶ್ಲಾಘನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

Leave a Comment